ದುಬೈಯಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ನಿವಾಸಿ ಕ್ಲೊಟಿಲ್ಡಾ ಡಿಕೊಸ್ತಾ (68) ಎಂಬವರು ಊರಿಗೆ ಬಂದಿದ್ದು, ಇವರಿಗೆ ಡಿಸೆಂಬರ್. 2 ರಂದು ಮೇಸೆಂಜರ್ ಮೂಲಕ ರೊಮಾನಿಯ ದೇಶದ ಇಂಗ್ಲೆಂಡ್‌ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಫಿಲಿಪ್ ಜೇಮ್ಸ್ ಎಂಬಾತನ ಪರಿಚಯವಾಗಿತ್ತು. ಈತ ವಾಟ್ಸ್ ಆಪ್ ಕರೆ ಮಾಡಿ, ಮೆಸೇಜ್ ಮೂಲಕ ಮಾತನಾಡುತ್ತಿದ್ದ.
ಡಿಸೆಂಬರ್ . 20 ರಂದು ಫಿಲಿಪ್ ಜೇಮ್ಸ್ ತಾನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದು, ತನ್ನನ್ನು ಕಸ್ಟಮ್ ನವರು ಹಿಡಿದಿಟ್ಟಿದ್ದಾರೆ, ನನಗೆ ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಕ್ಲೊಟಿಲ್ಡಾ ಡಿಕೋಸ್ತ ನಂಬಿಸಿದನು.
ಹೀಗೆ ಮೋಸದಿಂದ ಆತ ಕ್ಲೊಟಿಲ್ಡಾ ಅವರಿಂದ ಹಂತಹಂತವಾಗಿ ಒಟ್ಟು 13,70,042 ರೂ. ಹಣವನ್ನು ಖಾತೆಗೆ ಹಾಕಿಸಿ, ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸದೆ ವಂಚನೆ ಮಾಡಿದ್ದಾನೆ ಎಂದು ದೂರಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ