ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ರದ್ದು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಕೋವಿಡ್ -19 ರೂಪಾಂತರಿ ಮತ್ತು ಒಮಿಕ್ರಾನ್ ವೈರಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ದಿನಾಂಕ:05.01.2022 ರಂದು ಜಿಲ್ಲಾಡಳಿತದಿಂದ ಹೊರಡಿಸಿರುವ ಆದೇಶದನ್ವಯ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ದಿನಾಂಕ: 05.01.2022 ರ ಅಪರಾಹ್ನ 10.00 ರಿಂದ ದಿನಾಂಕ: 19.01.2022 ರ ಪೂರ್ವಾಹ್ನ 5.00 ರ ವರೆಗೆ ಕಟ್ಟು ನಿಟ್ಟಾಗಿ ಜಾರಿಯಲ್ಲಿರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧಿಕಾರಿಯವರು ಉಡುಪಿ ಜಿಲ್ಲೆಯಲ್ಲಿ ವಾರಂತ್ಯ ಕರ್ಫ್ಯೂ ವನ್ನು ರದ್ದುಪಡಿಸಿರುತ್ತಾರೆ ಎಂದು ದಿನಾಂಕ 10.09.2021 ರ ವಿಡಿಯೋ ತುಣುಕನ್ನು ಹರಿಯಬಿಟ್ಟಿರುವುದು, ಜನರಲ್ಲಿ ಗೊಂದಲ ಸೃಷ್ಟಿ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಇದು ಒಂದು ಸುಳ್ಳು ವದಂತಿಯಾಗಿದ್ದು, ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ದಿನಾಂಕ: 05.01.2022 ರ ಅಪರಾಹ್ನ 10.00 ರಿಂದ ದಿನಾಂಕ: 19.01.2022 ರ ಪೂರ್ವಾಹ್ನ 5.00 ರ ವರೆಗೆ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ