ಆರೋಪಿಯ ಕುರಿತು ನಾವೂರು ಪಟ್ಲ ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ಖಾದರ್(30) ಬಂಧಿತ ಆರೋಪಿ.
ಅಬ್ದುಲ್ ದನವನ್ನು ಅಕ್ರಮವಾಗಿ ಕಡಿದು ಮಾಂಸ ಮಾಡಿ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಜನವರಿ.15ರಂದು ಈ ಘಟನೆ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪಿ.ಎಸ್.ಐ ಹರೀಶ್ ವಾರಾಂತ್ಯ ಕರ್ಫ್ಯೂ ರೌಂಡ್ಸಿನಲ್ಲಿದ್ದ ವೇಳೆ ಸರಪಾಡಿ ಕಡೆಯಿಂದ ಆಟೋವೊಂದು ವೇಗವಾಗಿ ಹೋಗಿದ್ದು, ಪೊಲೀಸರು ಅದನ್ನು ನಿಲ್ಲಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯಿಂದ ಗೋಣಿಯಲ್ಲಿದ್ದ 2500 ರೂ.ಮೌಲ್ಯದ 15 ಕಟ್ಟು ಅಂದರೆ 30 ಕೆ.ಜಿ ದನದ ಮಾಂಸ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ