ನಿನ್ನೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೂವರು ಮಹಿಳೆಯರು ಸಾವನಪ್ಪಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಹೇಳಿದ್ದಾರೆ.
ನಿನ್ನೆ ಜಿಲ್ಲೆಯ ಮೂವರು ಹಿರಿಯ ಮಹಿಳೆಯರು ಕೋವಿಡ್-19ರಿಂದ ಮೃತಪಟ್ಟಿದ್ದಾರೆ.ಉಡುಪಿ ತಾಲೂಕಿನ 98ವಯಸ್ಸಿನ ಅಜ್ಜಿ ಹಾಗೂ 69 ವಯಸ್ಸಿನ ಮಹಿಳೆ ಅಲ್ಲದೇ ಕಾರ್ಕಳ ತಾಲೂಕಿನ 72 ವರ್ಷ ಪ್ರಾಯದ ಮಹಿಳೆಯರು ಸೋಂಕಿನಿಂದ ಮೃತಪಟ್ಟಿದ್ದು, ಇವರೆಲ್ಲರೂ ತೀವ್ರವಾದ ಕೊರೋನ ಗುಣಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಬಲಿಯಾದವರ ಸಂಖ್ಯೆ 486ಕ್ಕೇರಿದೆ.
ಮೃತಪಟ್ಟ ಮೂವರಲ್ಲಿ ಕಾರ್ಕಳದ 72ರ ಹರೆಯದ ಮಹಿಳೆ ಜ.21ಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದು, ಇಂದು ಮೃತಪಟ್ಟರೆ, ಉಳಿದವರಿಬ್ಬರು 22ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತಪಟ್ಟಿದ್ದರು. ಎಲ್ಲರೂ ಜ್ವರ, ಶೀತ, ಕೆಮ್ಮುವಿನಿಂದ ಬಳಲುತಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ