ಹಾವೇರಿಯಲ್ಲಿ ಅದ್ಧೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ 20 ಕೋಟಿ ರೂ.ಗಳನ್ನು ಮೀಸಲು ಇಟ್ಟಿದೆ.ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ ಅವರು ಆಯ್ಕೆಗೊಂಡಿದ್ದಾರೆ.
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಧ್ಯೇಯವಾಕ್ಯ ರಚನೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಲಾಂಛನ ಮತ್ತು ಧ್ಯೇಯವಾಕ್ಯ ರಚಿಸಿದವರಿಗೆ ಸೂಕ್ತ ಗೌರವ ನೀಡಲಾಗುವುದು. ಈ ಸಂಬಂಧ ಮಾರ್ಚ್ 31 ರೊಳಗಾಗಿ ಲಾಂಛನ ಮತ್ತು ಧ್ಯೇಯವಾಕ್ಯಗಳನ್ನು ರಚಿಸಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳು 18, ಇ-ಮೇಲ್ kannadaparishattu@gmail.com ವಿಳಾಸಕ್ಕೆ ಕಳುಹಿಸಿಕೊಡಬಹುದು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ