Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ನೂಪುರ್ ಶರ್ಮಾ ವಿರುದ್ಧ ಸೇಡು ತೀರಿಸಿಕೊಳ್ತವೆ :-ಅಲ್ ಖೈದಾ ಎಚ್ಚರಿಕೆ 16-8-2022


 ನವದೆಹಲಿ : ನೂಪುರ್ ಶರ್ಮಾ ವಿರುದ್ಧ ಸೇಡು ತೀರಿಸಿಕೊಳ್ತವೆ ಎಂದು ಅಲ್ ಖೈದಾ ತನ್ನ ಪ್ರಚಾರ ನಿಯತಕಾಲಿಕೆ ' ನವೈ ಘಾ - ಎ - ಹಿಂದ್ ' ನಲ್ಲಿ ಹೇಳಿದೆ .

 ನೂಪುರ್ ಶರ್ಮಾ ಧರ್ಮನಿಂದನೆ ಮಾಡಿದ್ದಾಳೆ , ಆಕೆಗೆ ಶಿಕ್ಷೆಯಾಗಬೇಕು ಎಂದು ಅಲ್ ಖೈದಾ ಹೇಳಿದೆ . ಇದಕ್ಕಾಗಿ ಮುಸ್ಲಿಮರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರೇರೇಪಿಸಿದೆ .. ಅಲ್ ಖೈದಾ ಮುಸ್ಲಿಮರನ್ನು ಜಿಹಾದ್ ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳುವಂತೆ ಹೇಳಿದೆ .




 ಅದರೊಂದಿಗೆ ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಅಂಶವನ್ನೂ ಕೂಡ ಅಲ್‌ಖೈದಾ ಪುನರುಚ್ಚರಿಸಿದೆ . ಈ ಹಿಂದೆ ದೆಹಲಿ , ಮುಂಬೈ , ಯುಪಿ ಮತ್ತು ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿತ್ತು . ಅಲ್‌ಖೈದಾ ನೀಡಿದ ಈ ಬೆದರಿಕೆ ಬಳಿಕ , ಗುಪ್ತಚರ ಇಲಾಖೆಯು ನೂಪುರ್ ಶರ್ಮ ಅವರ ಮೇಲಿನ ಭದ್ರತೆಯನ್ನು ಹೆಚ್ಚಳ ಮಾಡಿದ್ದವು . ಪ್ರಸ್ತುತ ನೂಪುರ್ ಶರ್ಮ ಅವರಿಗೆ ಗುಪ್ತ ಸ್ಥಳದಲ್ಲಿ ಪೊಲೀಸ್ ಭದ್ರತೆಯಲ್ಲಿದ್ದಾರೆ . ಇತ್ತೀಚಿನ ಜೀವ ಬೆದರಿಕೆಯ ಪ್ರಕರಣಗಳ ಬಳಿಕ ಸರ್ಕಾರ , ಆಕೆಗೆ ನೀಡಲಾಗಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಿದೆ .



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo