ಕೊಡಗು : ಕೊಡಗಿನಲ್ಲಿ ಸಿದ್ದರಾಮಯ್ಯಗೆ ಮುತ್ತಿಗೆ ಯತ್ನ ನಡೆದಿದ್ದು, ‘ಮುಸ್ಲಿಂ ಏರಿಯಾ’ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ಧಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶ ಭೇಟಿ ವೇಳೆ ತಿತಿಮತಿ ಮಾರ್ಗದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು ಸಿದ್ದು ಕಾರು ಕಂಡು ಧಿಕ್ಕಾರ ಕೂಗಿದ್ಧಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದು ವಿರುದ್ದ ಆಕ್ರೋಶ ಹೊರಹಾಕುತ್ತಿದ್ದು, ಗೋಬ್ಯಾಕ್ ಸಿದ್ದು ಎಂದು ಪೋಸ್ಟರ್ ಅಭಿಯಾನ ನಡೆಸಿದ್ಧಾರೆ. ಕೊಡಗಿಗೆ ಸಿದ್ಧು ಖಾನ್.. ಕೊಡಗಿಗೆ ಸೂತಕ..” , “ಹಿಂದುಗಳ ನರಮೇಧ ನಡೆಸಿದ ಟಿಪ್ಪು ಶಿಷ್ಯ ಸಿದ್ಧು ಖಾನ್” ಅಂಥಾ ಪೋಸ್ಟರ್ ಮಾಡಿದ್ಧಾರೆ. ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಅಭಿಯಾನ ಶುರುವಾಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ