Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಂಗಳೂರು:-ಆನ್‌ಲೈನ್ ಮೂಲಕ ತರಿಸಿದ ಊಟ ತಿಂದು ವಿದ್ಯಾರ್ಥಿನಿ ಮೃತ್ಯು

Udupinews

 


ಮಂಗಳೂರು: ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ಹೊಸ ವರ್ಷದ ಹಿಂದಿನ ದಿನ ಆನ್ಲೈನ್ ಮೂಲಕ ತರಿಸಿದ ಊಟ ತಿಂದು 19 ವರ್ಷ ವಯಸ್ಸಿನ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿನಿ ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ .ಕಾಂ ವಿದ್ಯಾರ್ಥಿನಿಯಾಗಿದ್ದಳು . ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥ ಗೊಂಡಿದ್ದರು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ.

ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು . ಆದರೆ ಅಂಜುಶ್ರಿ ತೀವ್ರ ಅಸ್ವಸ್ಥತೆ ಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು . ಆದರೆ ಸ್ಥಿತಿ ಗಂಭೀರವಾದುರಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಟೇಲ್ ಮಾಲಿಕ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo