ನವದೆಹಲಿ : ದೇಶದ ಪ್ರಖ್ಯಾತ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಲಂಡನ್ ನಲ್ಲಿ ಮೂರನೇ ಬಾರಿ ಸಪ್ತಪದಿ ತುಳಿದಿದ್ದಾರೆ.
68 ರ ಹರೆಯದ ಹರೀಶ್ ಸಾಳ್ವೆ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಟ್ರಿನಾ (Trina) ಅವರೊಂದಿಗೆ ವಿವಾಹವಾಗಿದ್ದು, ಮದುವೆಗೆ ಭಾರತ ದಿಗ್ಗಜ ಉದ್ಯಮಿಗಳು ಹಾಜರಾಗಿದ್ದರು.
ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ಸುನಿಲ್ ಮಿತ್ತಲ್, ಎಲ್ ಎನ್ ಮಿತ್ತಲ್, ಎಸ್ ಪಿ ಲೋಹಿಯಾ, ಗೋಪಿ ಹಿಂದುಜಾ, ಲಲಿತ್ ಮೋದಿ, ಮಾಡೆಲ್ ಉಜ್ವಲ್ ರಾತ್ ಸೇರಿದಂತೆ ಹಲವು ಗಣ್ಯರು ವಿವಾಹ ಸಮಾರಂಭಕ್ಕೆ ಹಾಜರಾಗಿ ವಧೂವರರಿಗೆ ಶುಭ ಹಾರೈಸಿದ್ದಾರೆ.
ತಮ್ಮ ಮೊದಲ ಪತ್ನಿ ಮೀನಾಕ್ಷಿಗೆ 2020 ರಲ್ಲಿ ವಿಚ್ಛೇದನ ನೀಡಿದ್ದ ಹರೀಶ್ ಸಾಳ್ವೆ ಕೆರೋಲಿನಾ ಬ್ರೊಸ್ಸಾರ್ಡ್ ಕೈ ಹಿಡಿದಿದ್ದರು.
ಪಾಕಿಸ್ತಾನದಲ್ಲಿ ಗೂಡಚಾರಿಕೆ ಆರೋಪದಡಿ ಮರಣದಂಡನೆಗೆ ಗುರಿಯಾಗಿದ್ದ ಭಾರತದ ಯೋಧ ಕುಲಭೂಷಣ್ ಜಾಧವ್ ಪ್ರಕರಣ ಸೇರಿದಂತೆ ಭಾರತದ ಪರ ಹಲವು
ಮಹತ್ವದ ಪ್ರಕರಣಗಳಲ್ಲಿ ಹರೀಶ್ ಸಾಳ್ವೆ ವಕೀಲರಾಗಿದ್ದರು. ಟಾಟಾ ಸಮೂಹ ಸಂಸ್ಥೆ ಮತ್ತು ರಿಲೈಯನ್ಸ್ ಉದ್ಯಮಗಳು ಸಾಳ್ವೆಯವರ ಪ್ರಮುಖ ಕಕ್ಷಿದಾರರ ಪಟ್ಟಿಯಲ್ಲಿವೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ