ಮುಂಬಯಿ - ಪಿವಿಸಿ ಪೈಪ್ ಉತ್ಪಾದಿಸುವ "ಫಿನೋಲೆಕ್ಸ್" ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ತನ್ನ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಫಿನೋಲೆಕ್ಸ್ ಕಂಪನಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಟ್ವೀಟ್ ಮಾಡಿ ಈ ಜಾಹಿರಾತನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು. ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಫೀನೋಲೆಕ್ಸ್ ಕಂಪನಿ ಅದರ ಫೇಸ್ ಬುಕ್ ಖಾತೆಯಿಂದ ಜಾಹಿರಾತನ್ನು ತೆಗೆದುಹಾಕಿದೆ. ಆದರೆ ಈ ಕಂಪನಿಯಿದ ಯಾವುದೇ ಅಧೀಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ