ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ಅಯೋಧ್ಯೆಯ ತಪಸ್ವಿ ಮಹಂತ್ ಪರಮಹಂಸ ದಾಸ್ ಅವರು ತಮಿಳುನಾಡು ಸಚಿವರ ಶಿರಚ್ಛೇದ ಮಾಡುವವರಿಗೆ 10 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾರೂ ಉದಯನಿಧಿ ಸ್ಟಾಲಿನ್ ಅವರನ್ನು ಕೊಲ್ಲಲು ಧೈರ್ಯ ಮಾಡದಿದ್ದರೆ, ಅವರನ್ನು ಹುಡುಕಿ ತಾನೇ ಕೊಲ್ಲುವುದಾಗಿ ಪರಮಹಂಸ ಆಚಾರ್ಯ ಹೇಳಿದರು.
ಕಳೆದ 2,000 ವರ್ಷಗಳಲ್ಲಿ ಅನೇಕ ಧರ್ಮಗಳು ಬಂದು ಹೋದರೂ ಭೂಮಿಯ ಮೇಲೆ ಒಂದೇ ಒಂದು ಧರ್ಮ ಸ್ಥಿರವಾಗಿ ಅಸ್ತಿತ್ವದಲ್ಲಿದೆ ಎಂದರೆ ಅದು 'ಸನಾತನ ಧರ್ಮ'. ಸನಾತನ ಧರ್ಮಕ್ಕೆ ಅಂತ್ಯ ಎಂಬುದಿಲ್ಲ, ಅದು ಎಂದಿಗೂ ನಾಶವಾಗುವುದಿಲ್ಲ, ಅದನ್ನು ಯಾರಿಂದಲೂ ನಾಶಮಾಡಲಾಗುವುದಿಲ್ಲ ಎಂದು ತಪಸ್ವಿ ಖಡಕ್ ಎಚ್ಚರಿಕೆ ನೀಡಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ