Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕೆ.ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಜ.26 (ನಾಳೆ) ರಕ್ತದಾನ ಶಿಬಿರ

 


ಉಡುಪಿ, ಜ.25: ಯಶೋದಾ ಆಟೋ ಯೂನಿಯನ್, ಅಭಯಹಸ್ತ ಚಾರಿಟೆಬಲ್ ಟ್ರಸ್ಟ್‌ ಮಣಿಪಾಲ ಕೆಎಂಸಿ ರಕ್ಯನಿಧಿ ವಿಭಾಗ, ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗ, ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗದಿಂದ ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರ ಜನ್ಮದಿನದ ಪ್ರಯುಕ್ತ ಜ.26ರ (ನಾಳೆ) ಬೆಳಗ್ಗೆ 7ರಿಂದ ಮಧ್ಯಾಹ್ನ 3.30ರ ತನಕ ಶ್ರೀಕೃಷ್ಣಮಠ ಪಾರ್ಕಿಂಗ್ ಏರಿಯಾದಲ್ಲಿರುವ ಮಥುರಾ ಕಂಫರ್ಟ್‌ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಮಧ್ಯಾಹ್ನ 12ರಿಂದ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದು, ಬಡಗಬೆಟ್ಟು ಕ್ರೆ. ಕೋ-ಆಪ್.ಸೊಸೈಟಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು, ಉದ್ಯಮಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo