ಮಲ್ಪೆ : ಅಶ್ವಿನ್ ಜೀವನ್ ಫ್ರಾನ್ಸಿಸ್ ಡಿಸೋಜ (52), ತೆಂಕನಿಡಿಯೂರು ಗ್ರಾಮ ಇವರ ಮಗ ರಾನ್ಸ್ ಕ್ಯಾತಲ್ ಡಿಸೋಜ (12) ದಿನಾಂಕ 14/07/2025 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಸ್ನಾನ ಮಾಡಲು ಹೋದವನು ರೂಮಿನ ಬೆಡ್ ಮೇಲೆ ಮಲಗಿದ್ದು ಮಾತನಾಡುತ್ತಿಲ್ಲ, ಬಾಯಿಯಲ್ಲಿ ಜೊಲ್ಲು ಹೊರಗೆ ಬಂದಿದೆ ಎಂದು ಅವರ 2 ನೇ ಮಗಳು ದೂರವಾಣಿ ಕರೆಮಾಡಿ ಹೇಳಿದ್ದಾರೆ.
ಆತನನ್ನು ಮನೆ ಹತ್ತಿರದ ಆಪ್ತ ಕ್ಲಿನಿಕ್ ವೈದ್ಯರು ಪರೀಕ್ಷಿಸಿ ಪಲ್ಸ್ ತುಂಬಾ ಕಡಿಮೆ ಇದೆ, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆಂಬುಲೆನ್ಸ್ ನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಲ್ಲಿ ರಾನ್ಸ್ ಕ್ಯಾತಲ್ ಡಿಸೋಜ ನು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.
ರಾನ್ಸ್ ಕ್ಯಾತಲ್ ಡಿಸೋಜ ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2025 ಕಲಂ:194(3) BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ