ಹಂಗಾರಕಟ್ಟೆ:-ಕೋವಿಡ್ ಕಾಲಾವಧಿಯ ನಂತರ ಈಗಷ್ಟೇ ವಾಣಿಜ್ಯ ವ್ಯಾಪಾರಗಳು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಇಡೀ ವ್ಯಾಪಾರ ಕ್ಷೇತ್ರಕ್ಕೆ ಕೊರೋನಾ ನೀಡಿದ ಹೊಡೆತದಿಂದ ಉದ್ಯಮಗಳು ಸ್ವಲ್ಪ ಮಟ್ಟಿಗೆ ಪುನಶ್ಚೇತನ ಪಡೆದುಕೊಳ್ಳುತ್ತಿದೆ. ಆದರೆ ಸಮುದ್ರವನ್ನೇ ನಂಬಿ ಜೀವನ ನಡೆಸುವ ಮೀನುಗಾರರು ಮಾತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬದುಕಿನ ಬಂಡಿಯನ್ನು ನಡೆಸಲು ವ್ಯಥೆ ಪಡುವಂತಾಗಿದೆ.
ಮೀನುಗಾರರು ಎಂದೂ ಕೂಡ ಯಾರ ಬಳಿಯೂ ಸಹಾಯಕ್ಕಾಗಿ ಕೈಚಾಚುವವರಲ್ಲ, ಅವರು ಕಷ್ಟಪಟ್ಟು ದುಡಿದು ತಮ್ಮ ಜೀವನದ ಬಂಡಿಯನ್ನು ಸಾಗಿಸುವವರು.ಆದರೆ ಕೊರೋನಾ ಬಾಧಿಸಿದ ನಂತರ ಎಲ್ಲಾ ವರ್ಗದವರಂತೆ ಮೀನುಗಾರರೂ ಕೂಡ ಸಮಸ್ಯೆಯನ್ನ ಎದುರಿಸಿದರು. ಲಾಕ್‌ಡೌನ್ ಅವಧಿಯಲ್ಲಿ ಮೀನುಗಾರರೂ ಕೂಡ ಸಮುದ್ರಕ್ಕೆ ಇಳಿಯದಂತಾಗಿತ್ತು. ಮತ್ತೊಂದೆಡೆ ಸಮುದ್ರದ ಅಲೆಗಳ ಏರಿಳಿತ, ತೂಫಾನ್ ಇದೆಲ್ಲವೂ ಮೀನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮೀನುಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೆಲವು ದಿನಗಳಿಂದ ಹಂಗಾರಕಟ್ಟೆ ಬಂದರಿನಲ್ಲಿ 100 ಕ್ಕು ಅಧಿಕ ಬೋಟುಗಳು ಫಿಶಿಂಗ್ ಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿವೆ. ಮೊದಲೇ ಕೋವಿಡ್ 19 ಕಾಯಿಲೆ ಬಂದು ಲಾಕ್ ಡೌನ್ ಕಾರಣಕ್ಕಾಗಿ ಫಿಶಿಂಗ್ ಗೆ ನಿರ್ಬಂಧ ಹೇರಿ ಮೀನುಗಾರಿಕ ಉದ್ಯಮ ನಷ್ಟಕ್ಕೆ ಸಿಲುಕಿದೆ. ಆದರೆ ಈ ವರ್ಷವು ಮೀನುಗಾರಿಕ ಉದ್ಯಮ ಚೇತರಿಕೆಗೊಳ್ಳುವ ಲಕ್ಷಣಗಳೇನು ಕಂಡು ಬರುತ್ತಿಲ್ಲ. .ಕಳೆದ ವರ್ಷ ಕೊವೀಡ್ 19 ಸಮಸ್ಯೇಯನ್ನ ತಂದೊಡಿತ್ತು,
ಈಗ, ಮೀನುಗಾರಿಕೆಗೆ ಪ್ರಾಕೃತಿಕ ವಿಕೋಪಗಳು ಅಧಿಕವಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮುದ್ರದಲ್ಲಿ ತುಫಾನ್ ಅಧಿಕವಾಗಿದ್ದು ಇನ್ನೂ ಹತ್ತು ದಿನಗಳಿಗು ಅಧಿಕ ಕಾಲ ಮೀನುಗಾರಿಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಿಲ್ಲ.
ಸರ್ಕಾರ ಮೀನುಗಾರಿಕ ಕುಟುಂಬಗಳಿಗೆ ನೆರವು ನೀಡಿ ಸಹಕರಿಸಬೇಕು. ಅದೆಷ್ಟೋ ಕುಟುಂಬಗಳು ಮೀನುಗಾರಿಕೆಯನ್ನೆ ನಂಬಿಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿದೆ ಎಂದು ಬೋಟಿನ ಕಾರ್ಮಿಕರೊಬ್ಬರು ಉಡುಪಿ ಫಸ್ಟ್ ನ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
TRENDING
-
ಬ್ರಹ್ಮಾವರ: ಅನುತ್ತೀಣರಾದ ಚಿಂತೆಯಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.17ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ರಾಮ...
-
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕ...
-
ಮಲ್ಪೆ : ಅಶ್ವಿನ್ ಜೀವನ್ ಫ್ರಾನ್ಸಿಸ್ ಡಿಸೋಜ (52), ತೆಂಕನಿಡಿಯೂರು ಗ್ರಾಮ ಇವರ ಮಗ ರಾನ್ಸ್ ಕ್ಯಾತಲ್ ಡಿಸೋಜ (12) ದಿನಾಂಕ 14/07/2025 ರಂದು ರಾತ್ರಿ 7:30 ಗಂ...
-
ಉಡುಪಿ, ಜುಲೈ 20: ನಗರದ ಹೃದಯ ಭಾಗದಲ್ಲಿರುವ, ನಗರ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಕಂದಾಯ ಇಲಾಖೆಯ ಸರ್ಕಾರಿ ವಸತಿ ಸಮುಚ್ಛಯದಲ್ಲಿ ಮತ್ತೊಮ್ಮೆ ಕಳ್ಳತನ ನಡೆದಿದ್ದು, ...
-
ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿದ್ದ ತನಿಖೆಯಲ್ಲಿ ಮುಖ್ಯ...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ