Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಸುರತ್ಕಲ್:-ಡೆಟ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ10-1-2022

ಸುರತ್ಕಲ್ : ಸಾಲದ ಬಲೆಯಲ್ಲಿ ಸಿಲುಕಿ ನೊಂದ ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವಕನನ್ನು 26 ವರ್ಷ ಪ್ರಾಯದ ಸುಶಾಂತ್ (ಜಗ್ಗು) ಎಂದು ಗುರುತಿಸಲಾಗಿದೆ.

ಮೃತನ ಕುರಿತಂತೆ ಮೂಲ್ಕಿ ಸಮೀಪದ ಪಕ್ಷಿ ಕೆರೆ ನಿವಾಸಿಯಾಗಿರುವ ಸುಶಾಂತ್ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್’ರೈಸ್ ಕಾರ್ಪೋರೇಷನ್ ಕಚೇರಿಯಲ್ಲೇ ಕುತ್ತಿಗೆಗೆ ಟವೆಲ್ ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ. 

ಸಾಲದ ಕಾರಣಕ್ಕಾಗಿಯೇ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಸಧ್ಯಾ ಸುಶಾಂತ್ ಆತ್ಮಹತ್ಯೆ ಗೂ ಮುನ್ನ ಕನ್ನಡ ಮತ್ತು ತುಳು ಮಿಶ್ರಿತ ಭಾಷೆಯಲ್ಲಿ ಮರಣಪತ್ರ ಬರದಿಟ್ಟಿದ್ದು ಮರಣಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

“ಎಲ್ಲರಿಗೂ ಸ್ವಾರಿ, ನನಗೆ ಯಾರದ್ದೂ ನಂಬಿಕೆ ಉಳಿಸಲು ಆಗಲಿಲ್ಲ. ಹಣದ ವಿಷಯದಲ್ಲಿ ತೊಂದರೆ ಆಗಿದೆ ಅದಕ್ಕಾಗಿ ಕ್ಷಮಿಸಿ. ಒಂದು ವೇಳೆ ಆನ್ ಲೈನ್ ನಲ್ಲಿ ಸಾಲ ನೀಡಿದವರು ಕರೆ ಮಾಡಿದರೆ ನಾನು ಸತ್ತಿದ್ದೇನೆ ಎಂದು ಹೇಳಿ” ( ಸಾರಿ ಮಾತೆರೆಗ್ಲಾ, ಎಂಕ್‌ ಎರ್ನಲ ನಂಬಿಕೆ ಒರಿಪಾಯೆರೆ ಆಯಿಜಿ ಕಾಸ್‌ದ ವಿಷಯೊಡು ತೊಂದರೆ ಆಂಡ್‌ ಸಾರಿ ಆನ್‌ಲೈನ್‌ಡ್‌ ಲೋನ್‌ ದಕುಲು ಕಾಲ್‌ ಮಲ್ತೆರ್ಂಡ ಡೆತ್‌ ಆತೆ ಪನ್ಲೆ, ರಿಯಲಿ ಸಾರಿ ಫಾರ್‌ ಆಲ್‌ ) ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಈ ಕುರಿತಂತೆ ಸುಶಾಂತ್ ಅವರ ತಂದೆ ತಾಯಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಅಣ್ಣ ಅಶ್ವಿತ್ ಜೊತೆ ಪಕ್ಷಿಕೆರೆಯಲ್ಲಿ ವಾಸ್ತವ್ಯ ಇದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

ಸುಶಾಂತ್ ತೆಗೆದುಕೊಂಡ ಸಾಲ ತೀರಿಸಲು ಆಗದ ಕಾರಣಕ್ಕೆ ಮನನೊಂದಿದ್ದು, ಆನ್ ಲೈನ್ ನಲ್ಲಿ ಸಾಲ ನೀಡಿದವರಿಂದಲೂ ಮಾನಸಿಕ ಕಿರಿಕಿರಿ ಆಗಿರುವ ಹಿನ್ನೆಲೆಯಲ್ಲಿ ಸುಶಾಂತ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. 

ಆನ್ ಲೈನ್ ಸಾಲ ಪಡೆದು ಮಾನಸಿಕ ಕಿರಿಕಿರಿಗೆ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಕರಾವಳಿಯ ಎರಡನೇ ಪ್ರಕರಣ ಇದಾಗಿದ್ದು ತಿಂಗಳ ಹಿಂದೆಯಷ್ಟೆ ಕುಂದಾಪುರ ಮೂಲದ ಹೆಮ್ಮಾಡಿಯ ಯುವಕನೊಬ್ಬ ಆನ್ ಲೈನ್ ಸಾಲದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದನ್ನು ಉಲ್ಲೇಖಿಸಬಹುದು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo