ನಗರದ ಶಕ್ತಿನಗರದ ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿಯಲ್ಲಿ ಜನವರಿ 15 ರ ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.ಮೃತರನ್ನು ಕೊರಗಪ್ಪ (85) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರು ಮನೆಯ ಅಂಗಳದ ಮುಂಭಾಗ ನಿಂತಿದ್ದು, ಈ ವೇಳೆ ಮೋಹನ್ ಎಂಬವರು ಚಲಾಯಿಸುತ್ತಿದ್ದ ಫ್ಲೋರಿಂಗ್ ಟೈಲ್ಸ್ ತುಂಬಿಕೊಂಡ ಪಿಕ್ ಅಪ್ ನ್ನು ನಿರ್ಲಕ್ಷ್ಯವಾಗಿ ಹಿಂಬದಿ ಗಮನಿಸದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕೊರಗಪ್ಪ ಅವರಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯಾಗಿ ಬಿದ್ದ ರಭಸಕ್ಕೆ ಕೊರಗಪ್ಪ ಅವರ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಯವೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದ್ದು ಪಿಕ್ ಅಪ್ ವಾಹನದ ಚಾಲಕ ಮೋಹನ್ ರವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 05/2022 ಕಲಂ 304 (ಎ) ರಂತೆತೆ ಪ್ರಕರಣ ದಾಖಲಿಸಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ