Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಟೀಲು:-ವಿವೇಕಾನಂದರು ಯುವಜನತೆಗೆ ಆದರ್ಶ - ಪ್ರಕಾಶ್ ಮಲ್ಪೆ.17-1-2022

ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು ಕಟೀಲಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿ ವಿ ಯ ಕುಲಪತಿಗಳಾದ ಗೌರವಾನ್ವಿತ ಶ್ರೀ ಪ್ರೊ. ಪಿ. ಎಸ್. ಯಾಡಪಡಿತ್ತಾಯ ಉದ್ಗಾಟಿಸಿ ವಿವೇಕಾನಂದರ ಜೀವನ ಚರಿತ್ರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ದೇವಳದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಆಶೀರ್ವಚನ ಗೈದರು ಹಾಗೂ ಪ್ರಮುಖ ಭಾಷಣಕಾರರಾಗಿ ಆಗಮಿಸಿದ ಶ್ರೀ ಪ್ರಕಾಶ್ ಮಲ್ಪೆ ವಿವೇಕಾನಂದರ ಜೀವನದ ಹಲವು ಮಜಲುಗಳನ್ನು ಸವಿಸ್ತಾರವಾಗಿ ವಿವರಿಸಿ ವಿವೇಕಾನಂದರು ಭಾರತದ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಿ ಮಾಹಾನ್ ಸಂತ ಯುವಕರಿಗೆ ದೇಶಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸದಾ ಅದರ್ಶಪ್ರಾಯರು ಎಂದರು.

ಕಾರ್ಯಕ್ರಮದ ಸ್ವಾಗತವನ್ನು ಪ್ರಾಂಶುಪಾಲರಾದ ಶ್ರೀ ಕೃಷ್ಣ ಕಾಂಚನ್ ಗೈದರು , ಶ್ರೀ ಪರಮೇಶ್ವರ ವಂದಿಸಿದರು ಹಾಗೂ ಕಾರ್ಯಕ್ರಮದಲ್ಲಿ ಈಶ್ವರ ಕಟೀಲು, ಭಾಸ್ಕರ ದೇವಸ್ಯ, ಕೆ ರಾಘವೇಂದ್ರ ಭಟ್ ಮತಿತ್ತರರು ಉಪಸ್ಥಿತರಿದ್ದರು ಶ್ರೀ ಸಂತೋಷ ಆಳ್ವ ಕಾರ್ಯಕ್ರಮ ನಿರೂಪಿಸಿದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo