ಪಿಡಬ್ಲುಡಿ ಗುತ್ತಿಗೆದಾರ ಸಂತೋಷ ಕುಮಾರ್ ಶೆಟ್ಟಿ ಎನ್ನುವವರಿಗೆ ಆರೋಪಿಗಳಾದ ಮಣಿಪಾಲದ ಲ್ಯಾನ್ಸಿ ರಾಜ್(45) ಹಾಗೂ ಉಜಿರೆಯ ಗಂಗಾಧರ ರಾವ್ (50) ಎಂಬವರು 2021ರ ಜನವರಿ.10 ರಂದು ಬಂದು ಒಂದು ಕೋಟಿ ರೂಪಾಯಿ ಮೌಲ್ಯದ ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದರು.
ಬಳಿಕ ಅವರಿಂದ 28 ಲಕ್ಷ ರೂ. ಹಣವನ್ನು ಸಾಲದ ಕಾಗದ ಪತ್ರ ಮಾಡಲು ಎಂದು ಹೇಳಿ ಪಡೆದುಕೊಂಡು ಹೋಗಿದ್ದರು. ಆ ಬಳಿಕ ಆರೋಪಿ ಗಳು ಸಾಲವನ್ನು ತೆಗೆಯಿಸಿಕೊಡದೆ ಪಡೆದ ಹಣವನ್ನು ಕೂಡ ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ