ಕರಾವಳಿ ಭಾಗದ ಕಾಂಗ್ರೆಸ್ ಹಿರಿಯ ನಾಯಕ, ಮತ್ತು ಮಾಜೀ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಮುಂದಿನ ಯಾವುದೇ ಚುನಾವಣೆಗೆ ನಾನು ಇನ್ನು ಸ್ಪರ್ಧಿಸಲ್ಲ, ಯುವಕರಿಗೆ ಮತ್ತು ಯುವ ನಾಯಕರಿಗೆ ಅವಕಾಶ ಸಿಗುವಂತಾಗಬೇಕು, ಹೀಗಾಗಿ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಅವರು ಹೇಳಿದರು.
ನಮ್ಮ ಪಕ್ಷ ಬಯಸಿದರೆ ಸೇವೆಗೆ ಸಿದ್ಧನಾಗಿರುತ್ತೇನೆ, ಆದರೆ ಚುನಾವಣೆಗೆ ಸ್ಪರ್ಧಿಸಲ್ಲ. ರೈತ ಸಂಘದ ಮೂಲಕ ಸಾಮಾಜಿಕ ಕಾರ್ಯವನ್ನೂ ಮಾಡುವೆ ಎಂದು ಪ್ರತಾಪಚಂದ್ರ ಶೆಟ್ಟಿ ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ