ಕಳೆದ 2 ವರ್ಷ 2 ತಿಂಗಳುಗಳ ಕಾಲ ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು..ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು.
ನಗರದೊಳಗೆ ವ್ಯಾಪಾಕವಾಗಿ ನಡೆಯುತಿದ್ದ ಗೋಕಳ್ಳತನ, ಇತ್ಯಾದಿ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಣ ತರುವಲ್ಲಿ ಶ್ರಮಿಸಿದ್ದರು. ಕೊರೊನಾ, ಲಾಕ್ ಡೌನ್ ಅವಧಿಯಲ್ಲಿ ಕಾನೂನಿಗೆ ತೊಡಕಾಗದ ರೀತಿ ಜನಸಾಮಾನ್ಯರ ಜನಜೀವನಕ್ಕೆ ಹೆಚ್ಚಿನ ತೊಂದರೆಯಾಗದ ರೀತಿ ಕರ್ತವ್ಯ ಪಾಲನೆ ಮಾಡಿ ಸುಶೂತ್ರವಾಗಿ ನಿಭಾಯಿಸಿರುವುದು ಇವರ ಕರ್ತವ್ಯದ ನಿರ್ವಹಣೆಯಾಗಿತ್ತು.
ಸಾಮಾನ್ಯ ಜನರು ಸಮಸ್ಯೆಗಳನ್ನು ನೇರ ಇವರ ಬಳಿ ತೆರಳಿ ಹೇಳುವಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಜನಮೆಚ್ಚಿದ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ