ಬಂಟ್ವಾಳ: ನವ ವಿವಾಹಿತನೋರ್ವ ತೆಂಗಿನಮರ ಬಿದ್ದು ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜನವರಿ.9 ರಂದು ನಡೆದಿದೆ.
ಮೃತನ ಕುರಿತಂತೆ ಮೃತ ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ದುರ್ದೈವಿ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ ಕಡಿಯುವ ಗುತ್ತಿಗೆಯನ್ನು ಯತಿರಾಜ್ ಅವರು ಪಡೆದುಕೊಂಡಿದ್ದು , ಆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಕಡಿಯುತ್ತಿದ್ದ ತೆಂಗಿನ ಮರ ಯತಿರಾಜ್ ಅವರ ಮೇಲೆ ಬಿದ್ದಿದ್ದು ಗಾಯಗೊಂಡ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾರೂ ಆದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ