Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಹಂಗಾರಕಟ್ಟೆ:-ನೀಲಾಕಂಠೇಶ್ವರ ಭಜನಾ ಮಂಡಳಿಯಲ್ಲಿ ವಾರ್ಷಿಕ ಮಂಗಲೋತ್ಸವ 9-1-2022

ಹಂಗಾರಕಟ್ಟೆ : ಬಾಳ್ಕುದ್ರು ಗ್ರಾಮದಲ್ಲಿರುವ ಶ್ರೀ ನೀಲಾಕಂಠೇಶ್ವರ ಭಜನಾ ಮಂಡಳಿಯಲ್ಲಿ ವಾರ್ಷಿಕ ಮಂಗಲೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ಪ್ರಾರಂಭಗೊಂಡು ಆದಿತ್ಯವಾರ ಬೆಳಿಗ್ಗೆ ಮುಕ್ತಾಯಗೊಂಡಿತು.

ರಾಜ್ಯ, ಜಿಲ್ಲೆಯಾದ್ಯಂತ ಸಂಚರಿಸಿ ಹಲವು ಕಡೆಗಳಲ್ಲಿ ಭಜನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಬಾಳ್ಕುದ್ರು ಗ್ರಾಮದಲ್ಲಿ ಜನಮೆಚ್ಚುಗೆಯನ್ನು ಈ ಭಜನಾ ಮಂಡಳಿ ಗಳಿಸಿರುತ್ತದೆ. 
ಅಂತೆಯೆ ಶನಿವಾರ ಸಂಜೆ 6:15 ರ ಸುಮಾರಿಗೆ ಜ್ಯೋತಿ ಬೆಳಗುವಿಕೆಯ ಮೂಲಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಈ ನಡುವೆ ಕಚ್ಚೂರು ಶ್ರೀ ಮಾಲ್ತಿದೇವಿ ಮಹಿಳಾ ಭಜನಾ ಮಂಡಳಿ ಬಾರ್ಕೂರು, ಶ್ರೀ. ಮಾಸ್ತಿಯಮ್ಮ ಮಹಿಳಾ ಕಲಾತಂಡ ಅಮ್ಮುಂಜೆ, ಶ್ರೀ ಮಂಜುನಾಥೇಶ್ವರ ಮಹಿಳಾ ಭಜನಾ ಮಂಡಳಿ. ಉಪ್ಪಿನಕೋಟೆ, ಶ್ರೀ ರಾಮ ಭಜನಾ ಮಂದಿರ. ಪಡುತೋನ್ಸೆ, ಶ್ರೀ ರುಖುಮಾಯಿ ದೇವಸ್ಥಾನ. ಕೋಡಿ ಬೆಂಗ್ರೆ , ಸರ್ವಶಕ್ತಿ ಸ್ವರೂಪಿಣಿ ಭಜನಾ ಮಂಡಳಿ. ಅಮ್ಮುಂಜೆ. ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ. ಗುಜ್ಜರ್ ಬೆಟ್ಟು, ಶ್ರೀ ವಾಗೀಶ್ವರಿ ಭಜನಾ ಮಂಡಳಿ. ಕದಿಕೆ, ಶ್ರೀ ರಾಘವೇಂದ್ರ ಭಜನಾ ಮಂಡಳಿ.ಪಾಂಡೇಶ್ವರ, ಶ್ರೀ ಯಕ್ಷೇಶ್ವರಿ ಭಜನಾ ಮಂಡಳಿ. ಕೋಡಿತಲೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ. ಅಂಬಲಪಾಡಿ, ಶ್ರೀ ಶಾರದಾಂಬ ಭಜನಾ ಮಂಡಳಿ. ನೇಜಾರು, ಶ್ರೀ ವೀರಾಂಜನೇಯ ಭಜನಾ ಮಂಡಳಿ. ಕೊಳಲಗಿರಿ, ಶ್ರೀ ಉಧ್ಬವಲಿಂಗೇಶ್ವರ ಭಜನಾ ಮಂಡಳಿ, ಕೋಟ ಪಡುಕರೆ, ಮಂಗಲೋತ್ಸವದಲ್ಲಿ ಭಾಗವಹಿಸಿದ್ದವು.

ಆದಿತ್ಯವಾರ ಮುಂಜಾನೆ ಭಜನಾ ಮಂಗಲದೊಂದಿಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo