ಉಡುಪಿ : ಕೋವಿಡ್ 19 ದಿನೇ ದಿನೇ ಜಾಸ್ತಿಯಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳನ್ನು ಸರಳ ರೀತಿಯಲ್ಲಿ ಆಚರಿಸುವ ಪರಿಸ್ಥಿತಿ ಬಂದೊದಗಿದೆ.
ಕೊವೀಡ್ 19 ನಾ 3 ನೇ ಅಲೆಯೂ ವ್ಯಾಪಕವಾಗಿ ಹರಡುತ್ತಿರುವುದರಿಂದ 2022ರ ಪರ್ಯಾಯ ಮಹೋತ್ಸವವು ಸರಳವಾಗಿ, ಸಾಂಪ್ರದಾಯಿಕವಾಗಿ ನಡೆಯಲಿದೆ.
ಆದ್ದರಿಂದ ಪರ್ಯಾಯದ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಮತ್ತು ವೀಕ್ಷಿಸಲು ಅವಕಾಶ ಇರುವುದಿಲ್ಲ.
ಸಾರ್ವಜನಿಕರು ಪರ್ಯಾಯ ಮಹೋತ್ಸವದ ನೇರಪ್ರಸಾರವನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಿ ಪೊಡವಿಗೊಡೆಯ ಶ್ರೀ ಕೃಷ್ಣ ಮುಖ್ಯಪ್ರಾಣನ ಆಶಿರ್ವಾದ ಪಡೆಯಬೇಕಾಗಿ ವಿನಂತಿಸಲಾಗಿದೆ.
ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಸುತ್ತ ಮುತ್ತ ಮತ್ತು ಮೆರವಣಿಗೆ ಬರುವ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿಗಳನ್ನು ರಾತ್ರಿ 9:30 ಯು ಒಳಗಡೆ ಮುಚ್ಚುವಂತೆ ಆದೇಶ ಹೊರಡಿಸಿದೆ.
ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ತೆರೆಯಲಾದ ಸ್ಟಾಲ್ ಅಥವ ತಾತ್ಕಾಲಿಕ ಅಂಗಡಿಗಳನ್ನು ನಿಲ್ಲಿಸಬಾರದಾಗಿ ವಿನಂತಿಸಲಾಗಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್, ಅಂಗಡಿಯ ಮುಗ್ಗಟ್ಟು ಗಳನ್ನು ಸಹ 9:30 ಯು ಒಳಗಡೆ ಮುಚ್ಚಿ ನಗರಸಭೆಯ ಜೊತೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ