Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಸರ್ಕಾರದಿಂದ ಬಡ್ಡಿರಹಿತ ಗೃಹ ಸಾಲ..!- ಗ್ರಾಮೀಣ, ನಗರ ಪ್ರದೇಶದ ಜನರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಲಭ್ಯ- ನಗರ ಪ್ರದೇಶದಲ್ಲಿ ₹12ಲಕ್ಷ, ಗ್ರಾಮೀಣ ಭಾಗದಲ್ಲಿ ₹ 6ಲಕ್ಷ ಸಾಲ17-3-2022

ಸರ್ಕಾರದಿಂದ ಬಡ್ಡಿರಹಿತ ಗೃಹ ಸಾಲ..!- ಗ್ರಾಮೀಣ, ನಗರ ಪ್ರದೇಶದ ಜನರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಲಭ್ಯ- ನಗರ ಪ್ರದೇಶದಲ್ಲಿ ₹12ಲಕ್ಷ, ಗ್ರಾಮೀಣ ಭಾಗದಲ್ಲಿ ₹ 6ಲಕ್ಷ ಸಾಲ

ಕರ್ನಾಟಕ ಸರ್ಕಾರ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ 'ಬಡ್ಡಿರಹಿತ ಗೃಹ ಸಾಲ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿ, ಕೆಲವು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಗೃಹ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿ ನೀಡುತ್ತದೆ. ಮೆಗಾ ಹೌಸಿಂಗ್ ಫಾರ್ ಆಲ್ ಸ್ಕೀಮ್ ನಲ್ಲಿ ಮುಂದಿನ ಎರಡೂವರೆ ವರ್ಷಗಳಲ್ಲಿ (30 ತಿಂಗಳು) ಸುಮಾರು 19 ಲಕ್ಷ ಮನೆ ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ.


ಕರ್ನಾಟಕ ಬಡ್ಡಿರಹಿತ ಗೃಹ ಸಾಲ ಯೋಜನೆಯಡಿ ನಗರ ಪ್ರದೇಶಗಳಲ್ಲಿ 12 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಬಡ್ಡಿ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಇದಲ್ಲದೆ ಗ್ರಾಮೀಣ ಪ್ರದೇಶಗಳಿಗೆ 6 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಸರಕಾರವೇ ಬಡ್ಡಿ ಪಾವತಿಸಲಿದೆ. ಕರ್ನಾಟಕದ ಗೃಹ ಸಾಲ ಸಬ್ಸಿಡಿ ಪರಿಷ್ಕರಣೆಯ ನಂತರ ಜನರು ತಮ್ಮ ಮೂಲ ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿಸಬೇಕು.


ಕರ್ನಾಟಕ ಸರ್ಕಾರ ಹೌಸಿಂಗ್ ಫಾರ್ ಆಲ್ ಸ್ಕೀಮ್ ಅಡಿಯಲ್ಲಿ ಮುಂದಿನ 30 ತಿಂಗಳಲ್ಲಿ ಸುಮಾರು 19 ಲಕ್ಷ ಮನೆಗಳನ್ನು ನಿರ್ಮಿಸಲಿದೆ. ಹೊಸ ಗೃಹ ಸಾಲ ಸಬ್ಸಿಡಿ ಯೋಜನೆಯಡಿ, ಸರ್ಕಾರ ನಗರ ಫಲಾನುಭವಿಗಳಿಗೆ ಗರಿಷ್ಠ ₹12 ಲಕ್ಷ ಮತ್ತು ಗ್ರಾಮೀಣ ಪ್ರದೇಶದವರಿಗೆ ಗರಿಷ್ಠ ₹6 ಲಕ್ಷ ರೂ. ಸಾಲ ಪಡೆಯಬಹುದು.


ಪರಿಷ್ಕೃತ ಯೋಜನೆಯ ಪ್ರಕಾರ, ಫಲಾನುಭವಿಗಳು ಬ್ಯಾಂಕುಗಳಿಗೆ ಅಸಲು ಮೊತ್ತವನ್ನು ಮಾತ್ರ ಮರುಪಾವತಿಸಬೇಕು. ಕರ್ನಾಟಕ ಸರ್ಕಾರವು 15 ವರ್ಷಗಳ ಗರಿಷ್ಠ ಸಾಲದ ಅವಧಿಗೆ ವಸತಿ ಸಾಲಗಳ ಬಡ್ಡಿ ವೆಚ್ಚವನ್ನು ನಿಭಾಯಿಸಲಿದೆ. ಈ ಬಡ್ಡಿರಹಿತ ಗೃಹ ಸಾಲ ಯೋಜನೆಯಲ್ಲಿ, ಸರ್ಕಾರ ನಗರ ಪ್ರದೇಶಗಳಲ್ಲಿ 12 ಲಕ್ಷ ರೂಪಾಯಿ ಮೊತ್ತದ ಸಾಲಕ್ಕೆ ವಾರ್ಷಿಕ ಶೇ.6.5ರಂತೆ ಬಡ್ಡಿ ಪಾವತಿಸಲಿದೆ. ಅದರಂತೆ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ ರೂಪಾಯಿ ಮೊತ್ತದ ಸಾಲಕ್ಕೆ
ಶೇ.8ರ ದರದಲ್ಲಿ ಬಡ್ಡಿ ಪಾವತಿಸಲಿದೆ.


ವಸತಿ ಯೋಜನೆಯನ್ನು ಕರ್ನಾಟಕ ವಸತಿ ಮಂಡಳಿ, ಸ್ಥಳೀಯ ಸಂಸ್ಥೆಗಳು, ನಿಮಿತ್ರಿ ಕೇಂದ್ರಗಳು ಮತ್ತು ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo