ತನುತರ್ಪಣಮಂಡಲ ಸೇವೆ
ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಸನ್ನಿಧಿಯಲ್ಲಿ ತಾರೀಕು ಇಪ್ಪತ್ತ ರ ಭಾನುವಾರದಂದು ಬಹು ಫಲಪ್ರದವಾದ ನಾಗ ತನು ತರ್ಪಣ ಮಂಡಲ ಸೇವೆಯ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಲಿರುವುದು.
ಸರ್ವ ನಾಗದೋಷ ಪರಿಹಾರ ಕ್ಷೇತ್ರವಾಗಿ
ಪ್ರಚಲಿತದಲ್ಲಿರುವ ಶ್ರೀ ನಾಗರಾಜ ನಾಗರಾಣಿಯರ ಸನ್ನಿಧಿಯಲ್ಲಿ ಈ ಮಹಾನ್ ಸೇವೆಯು ಪ್ರಾಯಶ್ಚಿತ್ತ ಪೂರ್ವಕವಾಗಿ ಕಾರ್ಕಳದ ಶ್ರೀಮತಿ ವನಮಾಲಾ ಎಸ್ ದೇವಾಡಿಗ ಮತ್ತು ಮನೆಯವರ ಬಾಬ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ.
ಈ ಮಂಡಲ ಸೇವೆಯು ಸಂಜೆ ಘಂಟೆ 5ರಿಂದ ಆರಂಭಗೊಳ್ಳಲಿದೆ.ಕಾರ್ಯಕ್ರಮದಲ್ಲಿ ನಾಗ ಸಂದರ್ಶನವೂ ನಡೆಯಲಿದ್ದು
ನಾಗ ಸಂದರ್ಶನವನ್ನು ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ಅವರು ನಡೆಸಿಕೊಡಲಿದ್ದಾರೆ.
ತತ್ಸಂಬಂಧವಾಗಿ ಬೆಳಿಗ್ಗೆ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ ಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಲಿದೆಎಂದು .ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ