Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ ಮುಂದುವರಿದ ಹಿಜಾಬ್ ವಿವಾದ:-ಕಿಡಿಗೇಡಿಗಳಿಂದ ಮಲ್ಪೆ ಪರಿಸರದಲ್ಲಿ ಗೋಡೆ ಬರಹ18-3-2022

ಹಿಜಾಬ್ ಪರವಾಗಿ ಕೆಲವೊಂದು ಕಿಡಿಗೇಡಿಗಳು ವಿವಾದಾಸ್ಪದವಾದ ಗೋಡೆ ಬರಹವನ್ನು ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಬರೆದಿರುವುದು ಗುರುವಾರ ಪತ್ತೆಯಾಗಿದ್ದು ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನ್ಯಾಯಾಲಯ ಹಿಜಾಬ್ ವಿರುದ್ಧ ಆದೇಶ ನೀಡಿದ ಬೆನ್ನಲ್ಲೇ ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಹಿಜಾಬ್‌ ಪರವಾಗಿ ಗೋಡೆ ಬರಹ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಕೂಡಲೇ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣಬಸವ ಪಾಟೀಲ್‌ ಹಾಗೂ ಮಲ್ಪೆ ಠಾಣಾಧಿಕಾರಿ ಸಕ್ತಿವೇಲು ಹಿಂದೂ ಕಾರ್ಯಕರ್ತರ ಮನವೊಲಿಸಿ ಸ್ಥಳದಿಂದ ತೆರಳುವಂತೆ ಮನವೊಲಿಸಿದರು.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo