Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್*18-3-2022

*ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್*

ನವದೆಹಲಿ:-ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದ್ರೆ ಆಕೆಗೆ ಅವನ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಪಂಜಾಬ್-ಹರಿಯಾಣ ಹೈಕೋರ್ಟ್‍ನಲ್ಲಿ ಪತಿಯೊಬ್ಬ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದನು.

 ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಹೆಂಡತಿಯೂ ಸಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಇವರ ವಿಚಾರಣೆಯನ್ನು ಮಾಡಿದರು. 


ವಿಚಾರಣೆ ವೇಳೆ ಮಹಿಳೆಯು, ತನ್ನ ಮಗಳಿಗೆ ಶಿಕ್ಷಣ ನೀಡಲು ಮತ್ತು ಮದುವೆ ಮಾಡಿಸಲು ಗಂಡ ಹಣವನ್ನು ನೀಡಬೇಕು ಎಂದು ವಾದ ಮಾಡುತ್ತಿರುತ್ತಾಳೆ. ಇದನ್ನು ನ್ಯಾಯಮೂರ್ತಿಗಳು ಆಲಿಸಿಕೊಳ್ಳತ್ತಿದ್ದು ನಂತರ, ಜನ್ಮದಾರಭ್ಯ ತಾಯಿಯ ಜೊತೆಗೆ ಈ ಯುವತಿ 20 ವರ್ಷ ಕಳೆದಿದ್ದಾಳೆ. 

ಈ ನಡುವೆ ಆಕೆ ತನ್ನ ತಂದೆಯನ್ನು ಸಂಪರ್ಕ ಮಾಡಲು ಬಯಸಿಲ್ಲ. ಆಕೆಗೆ ‘ಅಪ್ಪ’ ಎನ್ನುವ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಜವಾಬ್ದಾರಿ ತಂದೆಯ ಮೇಲೆ ಇರುವುದಿಲ್ಲ. ಅವಳಿಗೆ ಈ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಶಿಕ್ಷಣ ಮತ್ತು ಮದುವೆಗೆ ತಂದೆಯಿಂದ ಹಣ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.


ಮಹಿಳೆಯ ಜೀವನ ನಿರ್ವಹಣೆಗೆ ಪರಿಹಾರವಾಗಿ ತಿಂಗಳಿಗೆ 8,000 ರೂ ಮತ್ತು ಅಂತಿಮವಾಗಿ 10 ಲಕ್ಷ ರೂ. ನೀಡಬೇಕು ಎಂದು ತೀರ್ಪು ಕೊಟ್ಟಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo