ಇಂದು ಮುಂಜಾಗನೆ 3.30ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಕ್ರೇನ್ ನಿಂದ ಆಗಮಿಸಿದಂತ ನವೀನ್ ಗ್ಯಾನಗೌಡರ್ ಪಾರ್ಥೀವ ಶರೀರವನ್ನು ಬರ ಮಾಡಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಕುಟುಂಬಸ್ಥರು, ನವೀನ್ ಮೃತದೇಹಕ್ಕೆ ಅಂತಿಮ ನಮನವನ್ನು ಸಲ್ಲಿಸಿದರು.
ಈ ಬಳಿಕ ಮಾತನಾಡಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಯುದ್ಧಪೀಡಿದ ಉಕ್ರೇನ್ ಭೂಮಿಯಿಂದ 19 ಸಾವಿರ ಮಂದಿಯನ್ನು ಭಾರತ ಸರ್ಕಾರದಿಂದ ಕರೆತರಲಾಗಿದೆ. ಇವರಲ್ಲಿ ಕರ್ನಾಟಕದವರು 572 ಮಂದಿ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ವಾಪಾಸ್ ಬಂದಿದ್ದಾರೆ. 67 ಜನರು ಮುಂಚಿತವಾಗಿಯೇ ವಾಪಾಸ್ ಆಗಿದ್ದಾರೆ. ಆದ್ರೇ ನವೀನ್ ಸಾವನ್ನಪ್ಪಿದ್ದು ದುರ್ಧೈವದ ಸಂಗತಿಯಾಗಿದೆ ಎಂದು ಹೇಳಿದರು.
ಉಕ್ರೇನ್ ಯುದ್ಧಭೂಮಿಯಲ್ಲಿ ಮೃತಪಟ್ಟಂತ ನವೀನ್ ಪಾರ್ಥೀವ ಶರೀರವನ್ನು ತರೋದಕ್ಕಾಗಿ ಸಂಸದರು, ಕೇಂದ್ರ ಸಚಿವರು ಪ್ರಯತ್ನಿಸಿ. ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದಂತ ನವೀನ್ ಪಾರ್ಥೀವ ಶರೀರವನ್ನು ವಾಪಾಸ್ ತರೋದೆ ದೊಡ್ಡ ಸವಾಲ್ ಆಗಿತ್ತು. ಆದರೂ ಕೇಂದ್ರ ಸರ್ಕಾರದ ಪ್ರಯತ್ನದ ಮೂಲಕ, ಇಂದು ವಾಪಾಸ್ ತರಿಸಲಾಗಿದೆ ಎಂದರು.
ನವೀನ್ ಪಾರ್ಥೀವ ಶರೀರವನ್ನು ಮರ್ಚರಿಯಲ್ಲಿ ಸೇವ್ ಮಾಡಿ ಇಟ್ಟ ಕಾರಣ ತರುವಂತೆ ಆಗಿದೆ. ರಷ್ಯಾ ಶೆಲ್ ದಾಳಿಯ ನಡುವೆಯೂ ಅವರ ಪಾರ್ಥೀವ ಶೇರೀರ ತಾಯ್ನಾಡಿಗೆ ವಾಪಾಸ್ ತಂದಿರೋದು ಭಾರತ ಸರ್ಕಾರದ ಪ್ರಯತ್ನವಾಗಿದೆ. ಈ ಪ್ರಯತ್ನಕ್ಕೆ ಸಹಕರಿಸಿದಂತ ಪ್ರಧಾನಿ ಮೋದಿ, ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ಸಹ ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ