ಮೈಸೂರು:-ಹಿಂದುಗಳ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮುಸ್ಲಿಮರಿಗೆ ಯಾವುದೇ ರೀತಿಯ ವ್ಯಾಪಾರ, ವಹಿವಾಟು ನಡೆಸುವುದಕ್ಕೆ ಅವಕಾಶ ನೀಡಬಾರದು. ಹೀಗಾಗಲೇ ಅವರಿಗೆ ನೀಡಿರುವ ಅಂಗಡಿಯನ್ನು ಹಿಂತೆಗೆದುಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಶ್ವಹಿಂದು ಪರಿಷತ್‌ನ ಮೈಸೂರು ನಗರ ಜಿಲ್ಲಾ ಘಟಕದ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಈ ಕುರಿತು ಶನಿವಾರ ನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಅವರಿಗೆ ಮನವಿ ಸಲ್ಲಿಸಿದ ಪರಿಷತ್‌ನ ಮುಖಂಡರು, ಹಿಂದುಗಳ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರವಾಗಿರುವ ಚಾಮುಂಡಿಬೆಟ್ಟದಲ್ಲಿರುವ ದೇವಸ್ಥಾನದ ಹೃದಯ ಭಾಗದಲ್ಲಿ ಬಟ್ಟೆ ಅಂಗಡಿ ಸೇರಿದಂತೆ ಐದು ಮಳಿಗೆಗಳನ್ನು ಮುಸ್ಲಿಮರಿಗೆ ನೀಡಿರುವುದು ಸರಿಯಲ್ಲ. ಹಿಂದುಗಳ ಸಂಪ್ರದಾಯ, ಆಚಾರ, ವಿಚಾರಗಳು ಹಾಗೂ ಸರ್ಕಾರ, ನ್ಯಾಯಾಲಯದ ಆದೇಶಗಳನ್ನು ಒಪ್ಪದೆ, ಯಾರಿಗೂ ಗೌರವ ಕೊಡದ ಮುಸ್ಲಿಮರಿಗೆ ಹಿಂದುಗಳ ಪವಿತ್ರ ಧಾರ್ಮಿಕ ಸ್ಥಳದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಿರುವುದು ಸರಿಯಲ್ಲ. ಹಿಂದುಗಳ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ಭಕ್ತರು ಭಕ್ತಿಯಿಂದ ಅರ್ಪಿಸುವ ಸೀರೆಯನ್ನು ಮುಸ್ಲಿಮರು ಅಲ್ಲಿ ಮಾರಾಟ ಮಾಡುವುದು, ಅದರಿಂದ ಹಣಗಳಿಸುವುದು ಸರಿಯಲ್ಲ ಎಂದು ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ರಾಜ್ಯದ ಎಲ್ಲಾ ಜಾತ್ರಾ ಮಹೋತ್ಸವ, ದೇವಸ್ಥಾನಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಂಗಡಿ, ಮಳಿಗೆ ಹಾಕಲು ಹಿಂದುಯೇತರರಿಗೆ ಅವಕಾಶ ನೀಡಬಾರದು. ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಟೆಂಡರ್ ನೀಡಿದ್ದರೆ, ಅದನ್ನು ಮರುಪರಿಶೀಲನೆ ನಡೆಸಿ, ರದ್ದುಗೊಳಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಅಲ್ಲದೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಹಿಜಾಬ್ ವಿಚಾರವಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಗೌರವಿಸದೆ, ಅದರ ವಿರುದ್ಧ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿರುವ ಮುಸ್ಲಿಮರ ಧೋರಣೆ ಸಮಾಜದಲ್ಲಿ ಅಶಾಂತಿಯ, ಆತಂಕದ ಪರಿಸ್ಥಿತಿಯನ್ನು ಮೂಡಿಸಿದೆ. ಹಿಂದು ಸಮುದಾಯದಲ್ಲೂ ಆತಂಕವನ್ನುAಟು ಮಾಡಿದೆ. ದೇವಸ್ಥಾನಗಳ ಸುತ್ತಲಿನ ಹಿಂದುಗಳ ಸುರಕ್ಷತೆಯ ಬಗ್ಗೆ ಆತಂಕ ತಂದೊಡ್ಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮನವಿಸಲ್ಲಿಸುವ ವೇಳೆ ವಿಎಚ್ ಪಿ ನಗರ ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಬಿ.ಪ್ರದೀಶ್‌ಕುಮಾರ್, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಖಾಸಗಿ ಜಾಗದಲ್ಲಿ ಮುಸ್ಲಿಮರ ಮಾರಾಟ; ವಿಶ್ವಹಿಂದು ಪರಿಷತ್ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಚಾಮುಂಡಿಬೆಟ್ಟದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್, ದೇವಸ್ಥಾನದಿಂದ ಅಂಗಡಿ, ಮಳಿಗೆಗಳನ್ನು ಮುಸ್ಲಿಮರಿಗೆ ನೀಡುವ ವಿಚಾರವಾಗಿ ಯಾವುದೇ ಟೆಂಡರ್‌ನಲ್ಲಿ ನೀಡಿಲ್ಲ. ಬೆಟ್ಟದಲ್ಲಿರುವ ಖಾಸಗಿ ಜಾಗದಲ್ಲಿ ಮುಸ್ಲಿಮರು ಬಟ್ಟೆ,ಸೀರೆಗಳ ಮಾರಾಟ ಮಾಡುತ್ತಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬAಧವಿಲ್ಲ. ವಿಶ್ವಹಿಂದು ಪರಿಷತ್‌ನ ಮುಖಂಡರು ನೀಡಿರುವ ಮನವಿ ಪತ್ರವನ್ನು ಇಲಾಖೆಯ ಉನ್ನತಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ