ಹಲ್ಲೆಗೆ ಒಳಗಾದ ಕುಂದೇಶ್ವರ ದೇವಸ್ಥಾನದ ಬಳಿಯ ನರಿಗುಡ್ಡೆ ನಿವಾಸಿ ಸದಾಶಿವ ಕೋಟೆಗಾರ್(56) ಎಂಬವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಕುಂದಾಪುರದ ಬಾರೊಂದರ ಬಳಿ ಸಿಗರೇಟ್ ಸೇದುತ್ತಿದ್ದಾಗ ನಾಲ್ಕು ಜನ ಅಪರಿಚಿತರ ತಂಡ ಒಂದು ದೂಡಿ ದೊಣ್ಣೆಯಿಂದ ಹೊಡೆದರು. ಅದರಲ್ಲಿ ಇಬ್ಬರು ಕಬ್ಬಿಣದ ರಾಡ್ ಮತ್ತು ತಲವಾರು ಹಿಡಿದು ಕೊಂಡಿದ್ದು ಇವರೆಲ್ಲ ಸೇರಿ ಸದಾಶಿವ ಅವರಿಗೆ ಕಾಲಿನಿಂದ ತುಳಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಇವರು ಅಕ್ರಮದ ಕುರಿತು ಹಲವಾರು ದೂರನ್ನು ದಾಖಲಿಸಿದ್ದು ಇದರಿಂದಾಗಿ ಸಿಟ್ಟಾಗಿರುವ ಆರೋಪಿಗಳು ಈ ಕೃತ್ಯವನ್ನು ನಡೆಸಿರಬಹುದುದೆಂದು ದೂರಲಾಗಿದೆ.
ಸಧ್ಯ ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ