ಬಂಟ್ವಾಳ: ಕೋಳಿ ಮರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ.
ಮದರಮೂಲೆ ನಿವಾಸಿ ಮುದ್ದ ಮುಗೇರರ ಪುತ್ರ ವಸಂತ ಮುಗೇರ (37) ಮೃತರು. ಉಪ್ಪಳದಲ್ಲಿ ವಿದ್ಯುತ್ ಗುತ್ತಿಗೆ ಕಾರ್ಮಿಕನಾಗಿದ್ದ ವಸಂತ ಮುಗೇರ ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದಾಗಿ ರಜೆಯಲ್ಲಿದ್ದರು.
ನಿನ್ನೆ ಮನೆಯ ಮುಂದಿದ್ದ ಅಂದಾಜು 70 ಅಡಿ ಆಳದ ಬಾವಿಗೆ ಬಿದ್ದಿದ್ದ ಕೋಳಿಮರಿ ರಕ್ಷಿಸಲು ಇವರು ಮುಂದಾಗಿದ್ದಾರೆ. ಈ ವೇಳೆ ಬಾವಿಯ ಕಟ್ಟೆ ಕುಸಿದು ಬಾವಿಯೊಳಗೆ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ