ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಸುತ್ತಾಡುತ್ತಿದ್ದ ಮಗಳಿಗೆ ಬುದ್ಧಿ ಹೇಳಿದ್ದಕ್ಕೆ ಸ್ವಂತ ಅಮ್ಮನೇ ಕೊಲೆ ಮಾಡಿದ 17 ವರ್ಷದ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ತಮಿಳುನಾಡಿನ ತೂತುಕುಡಿಯಲ್ಲಿ ಇಂತಹ ಘಟನೆ ನಡೆದಿದ್ದು, 17 ವರ್ಷದ ಬಾಲಕಿ ತನ್ನ ಇಬ್ಬರು ಬಾಯ್ಫ್ರೆಂಡ್ಗಳ ಸಹಾಯದಿಂದ ತಾಯಿಯನ್ನು ಕೊಲೆಮಾಡಿದ್ದಾಳೆ.
ಬಾಲಕಿ ತನ್ನ ನೆರೆಹೊರೆಯ ಕೆಲವು ಯುವಕರೊಂದಿಗೆ ತಿರುಗಾಡುತ್ತಿದ್ದಳು, ಇದರಿಂದ ಮಗಳಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಆಕೆ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದಳು.ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಕಾರಣಕ್ಕೆ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾಳೆ.
ಆರಂಭದಲ್ಲಿ ಕೊಲೆ ವಿಚಾರ ತಿಳಿದು ಪೊಲೀಸರು ಬಂದಾಗ ಮುನಿಯಲಕ್ಷ್ಮಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಆಕೆಯ 17 ವರ್ಷದ ಮಗಳು ಮೃತದೇಹದ ಪಕ್ಕದಲ್ಲಿ ಕುಳಿತಿದ್ದಳು ಎನ್ನಲಾಗಿದೆ.
ಈ ಕುರಿತು ವಿಚಾರಿಸಿದಾಗ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ನನ್ನ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಆ ಬಾಲಕಿ ಹೇಳಿದ್ದಳು. ಆದರೆ ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಇಬ್ಬರು ಬಾಯ್ಫ್ರೆಂಡ್ಗಳ ಸಹಾಯದಿಂದ ಹುಡುಗಿ ತನ್ನ ತಾಯಿಯನ್ನು ಕೊಂದಿದ್ದಾಳೆ ಎಂದು ತಿಳಿದುಬಂದಿದೆ.
ಗಂಡನೊಂದಿಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮುನಿಯಲಕ್ಷ್ಮಿ ಒಂಟಿಯಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 17 ವರ್ಷದ ಬಾಲಕಿ, ಆಕೆಯ ತಂಗಿ ಮತ್ತು ತಮ್ಮ ಅಪ್ಪನೊಂದಿಗೆ ವಾಸಿಸುತ್ತಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ