ಉಡುಪಿಯಲ್ಲಿ ಮಾತನಾಡಿದ ರಘುಪತಿ ಭಟ್ 'ಒಬ್ಬ ಶಾಸಕನಾಗಿ ಯಾರಿಗೂ ಟೆಂಡರ್ ಕೊಡಲು ಸಾಧ್ಯವಿಲ್ಲ.
ಪ್ರತಿಯೊಂದು ಕಾಮಗಾರಿಯ ಟೆಂಡರ್ ಆನ್ ಲೈನ್ ನಲ್ಲಿ ನಡೆಯುತ್ತದೆ. ಅರ್ಹತೆ ಇದ್ದವರಿಗೆ, ಕಡಿಮೆ ಬಿಡ್ ಮಾಡಿದವರಿಗೆ ಟೆಂಡರ್ ಹೋಗುತ್ತದೆ. ನಾವು ಬಿಜೆಪಿ ಶಾಸಕರು ಮುಸ್ಲಿಂ ಧರ್ಮದ ವಿರೋಧಿಗಳಲ್ಲ. ಹಿಜಾಬ್ ಬ್ಯಾನ್ ಮಾಡಿ ಅಂತ ನಾವು ಎಲ್ಲೂ ಹೇಳಿಲ್ಲ.
ದೇವಸ್ಥಾನ ಸುತ್ತ ಸರಕಾರದ ಕಾನೂನು ಪಾಲಿಸಿದ್ದನ್ನು ಬೆಂಬಲಿಸಿದ್ದೇವೆ. ಶಾಸಕರು ಸಾರ್ವಜನಿಕ ವ್ಯಕ್ತಿಗಳು ನಮಗೆ ಆಧರ್ಮ ಈ ಧರ್ಮ ಎಂಬುದು ಇಲ್ಲ. ಎಲ್ಲರೂ ಸಮಾನವಾಗಿ ಇರುವುದಕ್ಕೆ ನನ್ನ ಬೆಂಬಲ. ಅತಿಯಾದ ಓಲೈಕೆ ಯಾವತ್ತಿಗೂ ಸರಿಯಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಗೆ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ಧಾರೆ.
ಇನ್ನು ಶಬರಿಮಲೆ ಪ್ರಕರಣವನ್ನು ಹಿಜಬ್ ಪ್ರಕರಣದ ಜೊತೆ ಹೋಲಿಸಬೇಡಿ. ದೇವಸ್ಥಾನದ ಧಾರ್ಮಿಕ ಆಚರಣೆಗೂ ಕಾಲೇಜಿನ ಸಮವಸ್ತ್ರಕ್ಕೂ ಹೋಲಿಕೆ ಸರಿಯಲ್ಲ. ರಾಜ್ಯದ ಹೈಕೋರ್ಟ್ ತೀರ್ಪು ಮತ್ತು ಶಬರಿಮಲೆ ತೀರ್ಪಿಗೂ ಹೋಲಿಕೆ ಸರಿಯಲ್ಲ. ಮಸೀದಿ, ಚರ್ಚ್, ದೇವಸ್ಥಾನದ ಆಚರಣೆಗೆ ವಿರುದ್ಧವಾಗಿ ತೀರ್ಪು ಬಂದರೆ ವಿರೋಧಿಸಬಹುದು. ಸಾರ್ವಜನಿಕ ಸಂಸ್ಥೆಯಲ್ಲಿ ನಿಯಮ ಪಾಲಿಸದಿರುವುದು ಸರಿಯಲ್ಲ ಎಂದು ರಘುಪತಿ ಭಟ್ ತಿಳಿಸಿದ್ಧಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ