ಕರಾವಳಿ ಭಾಗದಲ್ಲಿ ಆರಂಭಗೊಂಡ ಹಿಜಾಬ್, ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಭಂದ, ಹಲಾಲ್ ನಿಷೇಧ ಈಗ ಹಿಂದು ದೇವರ ಮತ್ತು ಪುಣ್ಯಕ್ಷೇತ್ರಗಳ ಹೆಸರಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ, ಮುಸ್ಲಿಂ ಅಂಗಡಿಗಳ ಹೆಸರು ಬದಲಿಸುವಂತೆ ಆಗ್ರಹ ಕೇಳಿಬರುತ್ತಿವೆ.
ಈ ಸಂಬಂಧ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಫೂಟ್ ವೇರ್ ಅಂಗಡಿಯ ಹೆಸರು ಬದಲಿಸುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ. ಈ ಅಂಗಡಿಯು ಸಾಲಿಗ್ರಾಮ ಪಟ್ಟಣದ ಮುಖ್ಯರಸ್ತೆಯಲ್ಲಿದ್ದು, ಹಿಂದೂ ದೇವರ ಹಾಗೂ ಪ್ರಸಿದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿದೆ. "ಸಾಲಿಗ್ರಾಮ ಫ್ಯಾನ್ಸೀ ಮತ್ತು ಪುಟ್ ವೇರ್" ಹೆಸರು ಬದಲಾಯಿಸುವಂತೆ ಒತ್ತಾಯಿಸಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ.
ಅಂಗಡಿ ಮಾಲೀಕ ಹಿಜಬ್ ಸಂಬಂಧಿಸಿದ ಕೋರ್ಟ್ ತೀರ್ಪು ವಿಚಾರದಲ್ಲಿ ಬಂದ್ ಮಾಡಿದ್ದರು. ಮುಸ್ಲಿಂ ಸಮುದಾಯ ನಮ್ಮ ಪವಿತ್ರ ಕ್ಷೇತ್ರದ ಹೆಸರು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ. ವ್ಯಾವಹಾರಿಕಾ ಅಂಗಡಿಯ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ನಡುವೆ ವ್ಯವಹಾರ ಅಸಹಕಾರ ಮುಂದುವರೆದಿದೆ. ಗ್ರಾಮಿಣ ಪ್ರದೇಶಗಳಿಗೂ ವ್ಯಾಪಾರ ಬಹಿಷ್ಕಾರ ಆವರಿಸಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸದಸ್ಯರು ಜಾತ್ರೆ ನಡೆಯುವಲ್ಲೆಲ್ಲಾ ಕರಪತ್ರ, ಬ್ಯಾನರ್ ಹಾಕಿ ವಹಿವಾಟಿಗೆ ತಡೆಯೊಡ್ಡುತ್ತಿದ್ದಾರೆ. ನಾಯಕರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ