ಬೈಂದೂರು: ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯು ರಕ್ತದಾನ ಶಿಬಿರ ಆಯೋಜಿಸಿ ಸಮಾಜಕ್ಕೆ ನೆರವಾಗಿದೆ ಎಂದು ಮುಂಬೈ ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಹೇಳಿದರು
ಉಪ್ಪುಂದದಲ್ಲಿ ಮೊಗವೀರ ಯುವ ಸಂಘಟನೆಯ ಬೈಂದೂರು-ಶಿರೂರು ಘಟಕ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ರಕ್ತನಿಧಿ ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಬೈಂದೂರು ಠಾಣಾಧಿಕಾರಿ ಪವನ್ ನಾಯ್ಕ, ಮೊಗವೀರ ಮಹಾಜನ ಸಂಘದ ಬಗ್ವಾಡಿ ಹೋಬಳಿ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮತ್ಸೋದ್ಯಮಿ ರಾಮ ಎನ್. ಮೊಗವೀರ ಅಳ್ವೆಗದ್ದೆ, ಉಪ್ಪುಂದ ಗ್ರಾಮ ಪಂಚಾಯಿತಿ ಸದಸ್ಯ ಜಗನ್ನಾಥ ಮೊಗವೀರ, ಗುತ್ತಿಗೆದಾರ ಜಿ. ಕುಶಲ್ ಶೆಟ್ಟಿ, ರವೀಶ್ ಮೊಗವೀರ, ಕೆಎಂಸಿ ವೈದ್ಯಾಧಿಕಾರಿಗಳಾದ ಡಾ.ಗಣೇಶ್ ಹಾಗೂ ಡಾ.ಅಜೀಜ್ ಇದ್ದರು.
ಸಂಘಟನೆ ಕಾರ್ಯದರ್ಶಿ ಗೌತಮ್ ಸ್ವಾಗತಿಸಿದರು. ವಿಕ್ರಮ್ ತಗ್ಗರ್ಸೆ ನಿರೂಪಿಸಿದರು. ಕೃಷ್ಣ ಮೊಗವೀರ ವಂದಿಸಿದರು. ರಕ್ತದಾನಿಗಳಿಗೆ ಗಿಡಗಳನ್ನು ವಿತರಿಸಲಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ