ಮಂಗಳೂರು: ಕರಾವಳಿಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೀನುಗಾರಿಕೆ ಆಗಸ್ಟ್ 1ರಂದು ಮತ್ತೆ ಆರಂಭಗೊಳ್ಳಲಿದ್ದು, ಮೀನುಗಾರರು ಭರದ ಸಿದ್ಧತೆ ನಡೆಸಿದ್ದಾರೆ.
ಪ್ರಸ್ತುತ ಮೀನುಗಾರಿಕೆ ಹಂಗಾಮದಲ್ಲಿ ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿಯಲು ಮೀನುಗಾರರು ಸಿದ್ಧತೆ ಮಾಡಿಕೊಂಡಿದ್ದಾರೆ.ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ದೊರೆಯುವಂತೆ ಮತ್ತು ಯಾವುದೇ ಅವಘಢ ಸಂಭವಿಸದಂತೆ ಸಮುದ್ರರಾಜ ಹಾಗೂ ತಮ್ಮ ಇಷ್ಟದೇವರಲ್ಲಿ ಮೊರೆ ಹೋಗಿದ್ದಾರೆ.
ಮೀನು ಮೊಟ್ಟೆ ಇಡುವ ಸಮಯದಲ್ಲಿ ಮೀನುಗಾರಿಕೆಗೆ ಕರಾವಳಿಯಲ್ಲಿ ನಿಷೇಧವಿರುತ್ತದೆ. ಕಡಲಿನಲ್ಲಿ ಮತ್ಸ್ಯ ಸಂಪತ್ತಿನ ವೃದ್ಧಿಯ ಆಶಯ ಈ ನಿಷೇಧದ ಉದ್ದೇಶವಾಗಿದೆ. ಮೀನುಗಾರಿಕೆ ಸ್ಥಗಿತ ಸಮಯದಲ್ಲಿ ಯಾಂತ್ರೀಕೃತ ದೋಣಿಯ ಮೂಲಕ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ನಾಡದೋಣಿ ಮೂಲಕ ಸಮುದ್ರ ಮೀನುಗಾರಿಕೆಗೆ ಅವಕಾಶವಿರುತ್ತದೆ
ದೋಣಿಗಳಲ್ಲಿ ದುಡಿಯುವವರಲ್ಲಿ ಬಹುಪಾಲು ಆಂಧ್ರ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಮೀನುಗಾರಿಕೆ ನಿಷೇಧ ಇರುವುದರಿಂದ ಅವರೆಲ್ಲ ರಜೆಯಲ್ಲಿ ಊರಿಗೆ ತೆರಳಿದ್ದಾರೆ. ಆದರೆ ಮೀನುಗಾರಿಕೆ ಶುರುವಾಗುವ ದಿನ ಹತ್ತಿರ ಬರಲಾರಂಭಿಸಿರುವುದರಿಂದ ಅವರು ಮತ್ತೆ ಮಂಗಳೂರಿನತ್ತ ಮುಖ ಮಾಡಿದ್ದಾರೆ.
ಜು. 31ಕ್ಕೆ ಐಸ್ ಪ್ಲಾಂಟ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿದೆ. ಮೀನುಗಾರಿಕೆಗೆ ಬೋಟುಗಳನ್ನು, ಎಂಜಿನ್ ಗಳನ್ನು ದುರಸ್ತಿಗೊಳಿಸಿ ಹಾಗೂ ಬಲೆಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆದಿದೆ.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ