ಬಾಳ್ಕುದ್ರು : ಸರ್ವೋದಯ ಯುವಕ ಮಂಡಲದ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಚಕ್ರವರ್ತಿ ಬಾರ್ ಹಂಗಾರಕಟ್ಟೆಯ ಮಾಲೀಕರಾದ ಹರ್ಷೇಂದ್ರ ಶೆಟ್ಟಿಯವರು ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಯುತ ವಿಜೇತ್ ದೇವಾಡಿಗ, ಮಹಿಳಾ ಮಂಡಳದ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಪಿ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ವಿಜಯ್ ಪೂಜಾರಿ ಹಾಗೂ ಊರಿನ ಹಿರಿಯರಾದ ಶ್ರೀಮತಿ ಅನುಸೂಯಾ ಟೀಚರ್ ಉಪಸ್ಥಿತರಿದ್ದರು.
ನಂತರ ಸ್ವಾತಂತ್ರ್ಯ ದಿನಾಚರಣೆಯ ಹಂಗಾರಕಟ್ಟೆ ಅಂಗನವಾಡಿಗೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರು ವಿದ್ಯಾರ್ಥಿಗಳಿಗೆ ಸರ್ವೋದಯ ಯುವಕ ಮಂಡಲದ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಕಾರ್ತಿಕ್ ಹಂಗಾರಕಟ್ಟೆ ಅವರು ನಿರೂಪಿಸಿ ರಾಮ ದಂಡಬೆಟ್ಟುರವರು ವಂದಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ