Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

*ಕರಾವಳಿಯಲ್ಲಿ ಮತ್ತೆ ಹೆಚ್ಚಾಗುತ್ತಿದೆ ಇಲಿ ಜ್ವರ..? ಇದರ ರೋಗಲಕ್ಷಣಗಳೇನು..? ಎಚ್ಚರ ಹೇಗೆ?*26-7-2022



ಇದೀಗ ಕರಾವಳಿಯಲ್ಲಿ ಇಲಿ ಜ್ವರದ ಪ್ರಕರಣಗಳು ಕಂಡುಬರುತ್ತಿದ್ದು ಮಂಗಳೂರು ನಗರದಲ್ಲಿ 17 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲಿ ಜ್ವರ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬಂದರು, ಮಳೆ ನಿಂತ ನಂತರ ಕೃಷಿ ತೋಟಗಾರಿಕಾ ಕೆಲಸಗಳಲ್ಲಿ ತೀವ್ರವಾಗಿ ತೊಡಗಿರುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.


ಇದು ಮುಖ್ಯವಾಗಿ ಸೋಂಕು ತಗುಲಿದ ಇಲಿ ಹೆಗ್ಗಣಗಳ ಮೂತ್ರದಿಂದ ಹರಡುವುದರಿಂದ ಇದನ್ನು ಇಲಿ ಜ್ವರ ಎಂದು ಕರೆಯುತ್ತಾರೆ. ಜ್ವರದ ನಿರ್ಲಕ್ಷ ಮಾಡಿದರೆ ಇದು ಮಾರಕವಾಗಿ ಪರಿಣಮಿಸಲಿದೆ.


ರೋಗಲಕ್ಷಣಗಳು:

ಲೆಪ್ಟೋಸ್ಟೈರ ಎಂಬ ಸೂಕ್ಷ್ಮಾಣು ನಿಂದ ಬರುವ ರೋಗವೇ” ಇಲಿ ಜ್ವರ”. ಇದು ಪ್ರಾಣಿಗಳ ಮೂತ್ರದಲ್ಲಿದ್ದು ಮನುಷ್ಯನ ದೇಹವನ್ನು ಸೇರಿ ಕಾಯಿಲೆಯನ್ನು ಹರಡುತ್ತದೆ. ಜ್ವರ ,ತಲೆನೋವು, ವಾಂತಿಭೇದಿ ಹೊಟ್ಟೆ ನೋವು, ಕೆಮ್ಮು, ಕಫ ಇವು ಇಲಿ ಜ್ವರದ ಪ್ರಮುಖ ಲಕ್ಷಣ .ಕೆಲವು ಸಂದರ್ಭಗಳಲ್ಲಿ ಜಾಂಡಿಸ್ ಕೂಡ ಕಂಡು ಬರಬಹುದು. ಇವು ಇಲಿ ಜ್ವರದ ಪ್ರಮುಖ ಲಕ್ಷಣಗಳು ಹಲವು ಬಾರಿ ಹೃದಯದ ಸೋಂಕು ಕೂಡ ಕಾಣಿಸಿಕೊಳ್ಳಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ ಕಿಡ್ನಿ ವೈಫಲ್ಯ ,ಪಿತ್ತಕೋಶದ ವೈಫಲ್ಯ, ಮೆದುಳು ಜ್ವರ ಮೊದಲಾದವು ಕಂಡು ಬಂದು ಮರಣ ಉಂಟಾಗಬಹುದು.




*ಮುನ್ನೆಚ್ಚರಿಕೆ:*

ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳು ಇಲಿಗಳಿಗೆ ಸಿಗದಂತೆ ದಾಸ್ತಾನು ಮಾಡಬೇಕು. ಗದ್ದೆ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕೈ ಮತ್ತು ಕಾಲಿಗೆ ರಬ್ಬರ್ ಗ್ಲೌಸ್ ಮತ್ತು ಬೂಟ್ ಗಳನ್ನು ಹಾಕಿಕೊಳ್ಳಬೇಕು .ಸ್ನಾನ ಮತ್ತು ಕುಡಿಯುವ ನೀರಿನ ಶೇಖರಣ ತೊಟ್ಟಿಗಳ ಮುಚ್ಚಳವನ್ನು ಭದ್ರವಾಗಿ ಹಾಕಬೇಕು. ನಮ್ಮ ಸುತ್ತಮುತ್ತ ಇಲಿಗಳು ವಾಸಮಾಡದಂತೆ ಎಚ್ಚರ ವಹಿಸಬೇಕು. ಕೊಳ ,ಹೊಂಡ ಇವುಗಳ ನೀರನ್ನು ಕುಡಿಯಲು ಬಳಸಬಾರದು. ಪರಿಶುದ್ಧ ನೀರಿನಲ್ಲಿ ಈಜಾಡುವಾಗ ಸೋಂಕಿರುವ ನೀರು ಮೂಗು, ಕಣ್ಣಿನ ರೆಪ್ಪೆಯ ಒಳಗೆ ಹೋದಾಗ ಸಹ ವ್ಯಕ್ತಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಯಾವುದೇ ಜ್ವರ ಅಥವಾ ಇತರ ಲಕ್ಷಣಗಳನ್ನು ನಿರ್ಲಕ್ಷಿಸದೇ ಕೂಡಲೇ ವೈದ್ಯರ ಸಲಹೆ ಚಿಕಿತ್ಸೆ ಪಡೆಯಬೇಕು.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo