Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ12-8-2022


ಕರ್ನಾಟಕದಲ್ಲಿಯೇ ಏಕೈಕ ಸನ್ನಿಧಾನವಾಗಿ ಭಾರತದಲ್ಲಿಯೇ ದ್ವಿತೀಯ ಸನ್ನಿಧಾನ ವೆನಿಸಿದ

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀ ಕುಬೇರ ಚಿತ್ರಲೇಖಾ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ವರಮಹಾಲಕ್ಷ್ಮಿವ್ರತ ಪೂಜೆ ಯು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಿತು. 




ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಶುಕ್ರವಾರದಂದು ಸಂಜೆ ನೆರವೇರಿದ ಈ ಪೂಜೆಯಲ್ಲಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ ವರಮಹಾ ಲಕ್ಷ್ಮಿ ವ್ರತ ಪೂಜೆಗೆ ಚಾಲನೆ ನೀಡಿದರು.ಪಂಚವರ್ಣ ತ್ವಿಕವಾಗಿ ರಚಿಸಲಾದ ಮಂಡಲದಲ್ಲಿ ಕಲಶ ಪ್ರತಿಷ್ಠಾಪಿಸಿ ಲಕ್ಷ್ಮಿಯನ್ನು ಆಹ್ವಾನಿಸಿ ವಿವಿಧ ಕುಸುಮಗಳಿಂದ ಅರ್ಚಿಸಿ ವಿವಿಧ ನಾಮಾವಳಿಗಳಿಂದ ಅರ್ಚಿಸಿ ಸಹಸ್ರನಾಮಾವಳಿಯಿಂದ ಸ್ತುತಿಸಿ ಸುಮಂಗಲಿಯರಿಂದ ಕುಂಕುಮವನ್ನು ಅರ್ಚಿಸಿ ಬಗೆಬಗೆಯ ನೈವೇದ್ಯವನ್ನಿಟ್ಟು ವಿಧವಿಧದ ಆರತಿಯನ್ನು ಬೆಳಗಿ ಪೂಜಿಸಲಾಯಿತು .

     ಸುಮಂಗಲಿಯರಿಗಾಗಿಯೇಮೀಸಲಾಗಿರುವ ಈ ವಿಶೇಷ ಪೂಜೆಯಲ್ಲಿ ಕಿಕ್ಕಿರಿದ ಭಕ್ತಸಮೂಹ ಕ್ಷೇತ್ರದ ಪೂಜೆಯಲ್ಲಿ ಪಾಲ್ಗೊಂಡರು.

ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಬ್ರಾಹ್ಮಣರಾದನೆ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನೆರವೇರಿತು .


ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ವಿಶೇಷ ವಾಗಿ ಕ್ಷೇತ್ರದ ಆನಂದ ಬಾಯರಿ ಅಲಂಕರಿಸಿದ್ದರು. ರಾತ್ರಿಯ ಮಹಾ ಪೂಜೆಯನ್ನು ಅರ್ಚಕ ಅ ನಿಶಾಚಾರ್ಯ ನೆರವೇರಿಸಿದರು.

ಗಾನ ನಾಟ್ಯ ಪ್ರಿಯಳಾದ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ವಿಶೇಷ ಸಂಗೀತ ಸೇವೆಯನ್ನು ಪ್ರೊಫೆಸರ್ ಅರವಿಂದ ಹೆಬ್ಬಾರ್ ಹಾಗೂ ಲತಾಂಗಿ ಸಿಸ್ಟರ್ಸ್ ನ ಕುಮಾರಿ ಸಮನ್ವಿ ಸಮರ್ಪಿಸಿದರು.


 

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo