ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ್ದ ಸ್ಯಾಂಡಲ್ವುಡ್ ನಟನೊಬ್ಬ ಅರೆಸ್ಟ್ ಆಗಿದ್ದಾನೆ.
ಜೆ.ಪಿ.ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ.
ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿದ್ದ ಆರೋಪಿ ಯುವರಾಜ್ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ.
ಉದ್ಯಮಿಗೆ ಇತ್ತೀಚೆಗೆ ಪರಿಚಯವಾಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. ನಂತರ ಉದ್ಯಮಿಗೆ ಭೇಟಿಯಾಗಿ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದ. ಜೊತೆಗೆ ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿದ್ದ.
ನಂತರ ಕೇಸ್ ಮುಂದುವರೆಸದಿರಲು ಹಣ ಕೇಳಿದ್ದು, ಮೊದಲಿಗೆ 50 ಸಾವಿರ, ನಂತರ ಬ್ಯಾಂಕ್ನಲ್ಲಿ 3 ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ.
ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದು, ಉದ್ಯಮಿಗೆ ಡೌಟ್ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ