ಮೈಸೂರು ; ಕೆಲವೇ ದಿನಗಳಲ್ಲಿ ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು, ಇಂದಿನಿಂದ ಅರಮನೆಯ ಹೊರ ಆವರಣದಲ್ಲಿ ಗಜಪಡೆಯ ತಾಲೀಮು ನಡೆಸಲಾಗುತ್ತಿದೆ.
ಇಂದಿನಿಂದ ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೂ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಸುವುದು ವಾಡಿಕೆಯಾಗಿದೆ. ಅಂತೆಯೇ ಇಂದು ತಾಲೀಮು ಆರಂಭಕ್ಕೂ ಮುನ್ನ ಅರಮನೆ ಅವರಣದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗಜಪಡೆಯ ನೇತೃತ್ವ ವಹಿಸಿರುವ ಅಭಿಮನ್ಯು, ಭೀಮ, ಗೋಪಾಲ ಸ್ವಾಮಿ, ಅರ್ಜುನ, ವಿಕ್ರಮ, ಧನಂಜಯ, ಗೋಪಿ, ಕಾವೇರಿ ಹಾಗು ಶ್ರೀರಾಮ ಆನೆಗಳು ಅಭ್ಯಾಸ ಶುರು ಮಾಡಿದವು. ಅರಮನೆ ಹೊರ ಆವರಣದಲ್ಲಿ ಗಜಪಡೆ ತಾಲೀಮು ಆರಂಭಗೊಂಡಿದೆ.
ಆದರೆ ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗಿತ್ತು. ಎರಡು ವರ್ಷಗಳ ನಂತರ ಮತ್ತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆ ವಾಯುವಿಹಾರಕ್ಕೆ ತೆರಳುತ್ತಿವೆ. ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆ ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಸರ್ಕಲ್, ಬಂಬೂ ಬಜಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪುತ್ತವೆ. ಮತ್ತೆ ಬನ್ನಿ ಮಂಟಪದಿಂದ ಅರಮನೆಗೆ ವಾಪಸ್ ಆಗಲಿವೆ.
ಈ ಬಾರಿಯೂ ಬಾರೀ ಎಚ್ಚರಿಕೆಯಿಂದ ಗಜಪಡೆಯ ಮುತುವರ್ಜಿ ವಹಿಸಲಾಗಿತ್ತಿದೆ. ಎಲ್ಲಾ ಆನೆಗಳಿಗೂ ಪ್ರತ್ಯೇಕವಾಗಿ ಆಹಾರ ನೀಡಲಾಗುತ್ತಿದೆ. ಪೌಷ್ಠಿಕ ಆಹಾರದ ಜೊತೆಗೆ ದಸರಾ ಮಹೋತ್ಸವದ ದಿನ ಬನ್ನಿಮಂಟಪಕ್ಕೆ ತೆರಳುವ ಮಾರ್ಗದಲ್ಲಿಯೇ ಗಜಪಡೆಗೆ ವಾಯು ವಿಹಾರದ ಜೊತೆಗೆ ತಾಲೀಮು ನಡೆಸಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ