ಜ್ಞಾನ ರತ್ನ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್( ರಿ) ನಿಡ್ಡೋಡಿ ಇಲ್ಲಿ 75 ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಭಾಸ್ಕರ ದೇವಸ್ಯ ರವರು ವಹಿಸಿದ್ದರು. ಧ್ವಜಾರೋಹಣವನ್ನು ಮೇಜರ್ ಲೋಹಿತ್ ಸುವರ್ಣ ಇವರು ನೆರವೇರಿಸಿ, ತಮ್ಮ ಭಾಷಣದಲ್ಲಿ ಸೇನೆಯ ಮಹತ್ವ ಹಾಗೂ ಭಾರತೀಯ ಸೇನೆಯ ನೇಮಕಾತಿ ಪಡೆಯುವಲ್ಲಿ ಇರುವ ಮಾರ್ಗಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಲಯನ್ಸ್ ಕ್ಲಬ್ ನಿಡೋಡಿ ಕಲ್ಲಮುಂಡ್ಕೂರು ಅಧ್ಯಕ್ಷರಾದ ಲಯನ್ ಲಾಜರಸ್ ಡಿಕಾಸ್ಟ, ಶ್ರೀ ಬಾಪೂಜಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನಿಡ್ಡೋಡಿ ಇದರ ಅಧ್ಯಕ್ಷರಾದ ಶ್ರೀ ಯಶವಂತ ಶೆಟ್ಟಿ ಅತಿಥಿಗಳಾಗಿ ಆಗಮಿಸಿದರು. ಅದೇ ರೀತಿ ಎಸ್ ಡಿ ಎಂ ಸಿ ಸದಸ್ಯರು ಪಾಲಕ ಪೋಷಕರು ,ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಕೆ ರಾಘವೇಂದ್ರ ಭಟ್, ಐಟಿಐ ಪ್ರಾಂಶುಪಾಲರಾದ ಶ್ರೀಮತಿ ಅನುರಾಧ ಎಸ್ ಸಾಲ್ಯಾನ್, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ದಿವ್ಯಾ ಎಸ್. ನಾಯಕ್ , ಮುಖ್ಯ ಶಿಕ್ಷಕಿ ಶ್ರೀಮತಿ ಸುಮಾ, ಬೋದಕ-ಬೋದಕೇತರ ಸಿಬ್ಬಂದಿ ಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಧ್ವಜಾರೋಹಣದ ನಂತರ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಯಿತು. ಸಂಸ್ಥೆ ವತಿಯಿಂದ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ