ಉಡುಪಿ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ . ಸೋನಿತ್ ಪೂಜಾರಿ ( 30 ) ಮೃತ ದುರ್ದೈವಿ .
ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸೋನಿತ್ ಪೂಜಾರಿ ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು .ಅಣ್ಣ ಅತ್ತಿಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ , ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಅತ್ತಿಗೆ ಆರೂವರೆ ಗಂಟೆಗೆ ಕೆಲಸ ಬಿಟ್ಟು ಮನೆಗೆ ಬಂದಾಗ ಬಾಗಿಲ ಚಿಲಕ ಒಳಗಿಂದ ಹಾಕಿತ್ತು . ಬೆಲ್ ಮಾಡಿದರೂ ತೆರೆಯದಿದ್ದಾಗ ಕಿಟಕಿ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ .
ಸ್ಥಳಕ್ಕೆ ಬಂದ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ