ಬೆಂಗಳೂರು : ಹಿಜಾಬ್ ದಂಗಲ್ ಬಳಿಕ ಶಾಲೆಗಳಲ್ಲಿ ಗೌರಿ ಗಣೇಶ್ ದಂಗಲ್ ಶುರುವಾಗಿದ್ದು, ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಗಣೇಶನನ್ನ ಕುಡಿಸಲು ಹಾಗೂ ಹೊಸದಾಗಿ ಈ ವರ್ಷ ಗಣೇಶನ ಪ್ರತಿಷ್ಠಾಪಿಸಲು ಮುಕ್ತ ಅವಕಾಶ ನೀಡಿದೆ.
ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಂಪ್ಲೀಟ್ ಸ್ವಾತಂತ್ರತ್ಯ ನೀಡಿದ್ದು, ಹೊಸದಾಗಿ ಗಣೇಶ ಮೂರ್ತಿ ಕೂಡಿಸಲು ಕೂಡಾ ಮುಕ್ತವಾದ ಅನಕೂಲ ಮಾಡುವುದಾಗಿ ಹೇಳಿದ್ಧಾರೆ. ಆದ್ರೆ ಶಿಕ್ಷಣ ಇಲಾಖೆಯ ನಡೆಗೆ ವಿರೋಧ ಕೇಳಿ ಬರುತ್ತಿದ್ದು. ಶಾಲೆಯಲ್ಲಿ ಶುಕ್ತವಾರ ಒಂದು ದಿನ ನಮಾಜ್ ಮಾಡಿದ್ದಕ್ಕೆ ಶಾಲೆಯ ಮುಖ್ಯಸ್ಥರನ್ನ ಕೆಲಸದಿಂದ ಸಸ್ಪೆಂಡ್ ಮಾಡಿದೆ. ಶಿಕ್ಷಣ ಇಲಾಖೆ ಹೀಗ ಗಣೇಶ ಮೂರ್ತಿ ಕೂಡಿಸಲು ಅವಕಾಶ ಮಾಡಿಕೊಟ್ಟಿದೆ ಹಿಜಾಬ್ ಬೇಡಾ ಅಂದವರು ಈಗ ಗಣೇಶ ಕೂಡಿಸಲು ಹೇಗೆ ಅವಕಾಶ ಕೊಡ್ತೀರಾ.
ಗಣೇಶ ಕೂಡಿಸಲು ಅವಕಾಶ ನೀಡೊದಾದ್ರೆ ನಮಗೆ ಶುಕ್ರವಾರ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ. ಕ್ರಿಶ್ಚಯನ್ಸ್ ಗೆ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಆಚರಣೆಗೆ ಅವಕಾಶ ಕೊಡಿ. ನಿಮ್ಮ ಓಟ್ ಬ್ಯಾಂಕಗೋಸ್ಕರ್ ನಿಮಗೆ ಹೇಗೆ ಬೇಕೋ ಹಾಗೆ ಮಾಡೊದಲ್ಲ. ನಮ್ಗೂ ನಮಾಜ್ ಮಾಡೋದಕ್ಕೆ ಕೊಡಿ ಅಂತಾ ಒತ್ತಾಯ ಮಾಡುತ್ತಿದ್ಧಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ