ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಶಾಲಾ ಸಂಸ್ಥಾಪಕರಾದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿಯವರ ಅಧ್ಯಕ್ಷತೆಯಲ್ಲಿಆಚರಿಸಲಾಯಿತು..
ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಾ ಪ್ರೊಫೆಸರ್ ಡಾಕ್ಟರ್ ರೀತು ಕೆಯೂರ್ ಧ್ವಜಾರೋಹಣ ಗೈದರು..
ಶಾಲಾ ಸಂಯೋಜಕಿ ಶ್ರೀಮತಿ ಕುಸುಮ ನಾಗರಾಜ್, ಉದ್ಯಮಿ ಆನಂದ್ ಬಾಯಿರೀ ಕಾಷ್ಟ ಶಿಲ್ಪಿ ಜಗದೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಶಾಲಾ ಆವರಣದಲ್ಲಿ ನೆರವೇರಿದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.. ಶಿಕ್ಷಕಿ ದೀಪಾ ಸ್ವಾಗತಿಸಿ ಪರಿಚಯಿಸಿದರು ತೀರ್ಥಕಲಾ ವಂದನಾರ್ಪಣೆ ಗೈದರು.
ಶಾಲಾ ಪರಿವೀಕ್ಷಕಿ ಕುಮಾರಿ ಸ್ವಾತಿ ಆಚಾರ್ಯ ಕಾರ್ಯಕ್ರಮ ಆಯೋಜಿಸಿದ್ದರು,ಶಿಕ್ಷಕ ರಾಘವೇಂದ್ರ ಯು ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ ಸುಚಿತ್ರ ಅಂಜಲಿ ಸಹಾಯಕಿ ಕಲಾವತಿ ಆಚಾರ್ಯ ಪೋಷಕರು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ನಿಧಿ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ