ಉಡುಪಿ: ಶಿವಮೊಗ್ಗದಲ್ಲಿ ನಡೆಸಿದ ಟ್ರಯಲ್ ಬಾಂಬ್ ಬ್ಲಾಸ್ಟ್, ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಮತ್ತು ಐಸಿಸ್ ಜೊತೆ ಸಂಪರ್ಕ ಆರೋಪಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಮುಂದುವರಿಸಿದ್ದು, ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಉಡುಪಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದೆ.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಅವರ ಮಗನನ್ನು ಎನ್‌ಐಎ ಪೊಲೀಸರು ಗುರುವಾರ ಬಂಧಿಸಿದ್ದಾರೆ. ತಾಜುದ್ದೀನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಸೀದಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕ ಯುಟಿ ಖಾದರ್ ಜೊತೆಗಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಶಿವಮೊಗ್ಗದ ಶಂಕಿತ ಉಗ್ರ ಮಾಝ್ ಮುನೀರ್ ಮತ್ತು ರಿಶಾನ್ ಒಂದೇ ಬ್ಯಾಚ್ ಮತ್ತು ರೂಮ್ ಮೇಟ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿಯಲ್ಲಿ ರಿಂಗಣಿಸಿ ಆತಂಕ ಸೃಷ್ಟಿಸಿದ ಸ್ಯಾಟಲೈಟ್ ಫೋನ್
ಈ ಕುರಿತಂತೆ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನ ಬಂಧನವಾಗಿದೆ. ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರಗೆ ಬರುತ್ತಿದೆ. ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕರಾವಳಿಯಲ್ಲಿ ಇಂತಹ ನಿಗೂಢ ಚಟುವಟಿಕೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಹಿಜಬ್ (Hijab) ವಿವಾದ ಆದಾಗಲೇ ನಾನು ಇಂತಹ ಆತಂಕ ವ್ಯಕ್ತಪಡಿಸಿದ್ದೆ. ಕರಾವಳಿ ಭಾಗದ ಮೇಲೆ ಎನ್‌ಐಎ ಹೆಚ್ಚಿನ ನಿಗಾ ಇರಿಸಬೇಕು. ಬ್ಲಾಕ್ ಕಾಂಗ್ರೆಸ್‌ನಲ್ಲಿ ತಾಜುದ್ದೀನ್ ಸಕ್ರಿಯ ಕಾರ್ಯಕರ್ತ. ಸಿದ್ದರಾಮಯ್ಯ, ಡಿಕೆಶಿ, ಯು ಟಿ ಖಾದರ್ ಪರಮಾಪ್ತ. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ. ರೇಶಾನ್ ಕುಟುಂಬದ ಬಗ್ಗೆ ಕೂಡಾ ತನಿಖೆ ಮಾಡಬೇಕು. ರೀಶಾನ್ ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ. ಆಕೆಯ ಮೇಲೆ ಲಿಖಿತ ದೂರನ್ನು ಕೆಲ ತಿಂಗಳ ಹಿಂದೆಯೇ ಶಿಕ್ಷಣ ಸಚಿವ ನಾಗೇಶ್ ಗೆ ನೀಡಲಾಗಿದೆ. ರಾಷ್ಟ್ರೀಯತೆ, ಪ್ರಧಾನಿ ಮೋದಿ ವಿರುದ್ಧ ಕೆಲಸ ಮಾಡುತ್ತಿದ್ದರು. ಕಾಲೇಜು ವಿರುದ್ಧವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನು ಸಚಿವರಿಗೆ ಕೊಡಲಾಗಿದೆ. ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು. ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೂಡಾ ತನಿಖೆ ಆಗಬೇಕು ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಐಸಿಸ್ ಸಂಪರ್ಕಿತರಿಂದ ಕ್ರಿಪ್ಟೋ ವ್ಯಾಲೆಟ್ ಹಣ ಪಡೆದು ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ರೇಶಾನ್ ಮೇಲಿದೆ. ದಾಳಿ ವೇಳೆ ಡಿಜಿಟಲ್ ಸಾಧನ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಹಾಗೂ ಟ್ರಾನ್ಸ್ ಫರ್ಮರ್‌ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ ಆರೋಪಿಗಳನ್ನ ಸದ್ಯ ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ