ಕುಂದಾಪುರ: ಟಿಪ್ಪರ್ ಲಾರಿಯೊಂದು ಹೋಟೆಲ್‌ಗೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರು ಗಂಭೀರವಾಗಿ ಗಾಯ ಗೊಂಡ ಘಟನೆ ಮಾವಿನ ಕಟ್ಟೆ ಕ್ರಾಸ್ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡವರನ್ನು ಮಾವಿನಕಟ್ಟೆ ನಿವಾಸಿ ಅಬಿದ್ದಿನ್ ಸಾಹೇಬ್ ಎಂದು ಗುರುತಿಸಲಾಗಿದೆ.
ಕುಂದಾಪುರದಿಂದ ಗುಲ್ವಾಡಿ ಕಡೆಗೆ ಆವೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ಚಾಲಕನ ನಿಯಂತ್ರಣ ತಪ್ಪಿ, ಮಾವಿನಕಟ್ಟೆಯ ಸರ್ಕಲ್ ಬಳಿಯ ಮಹಮ್ಮದ್ ಹನೀಫ್ ಎಂಬವರ ಸ್ವೀಕಾರ್ ಫ್ಯಾಮಿಲಿ ಡಾಬಾದ ಒಳಗೆ ನುಗ್ಗಿತ್ತೆನ್ನಲಾಗಿದೆ.
ಇದರಿಂದ ಮಾಲಕ ಹನೀಫ್ ಹಾಗೂ ಅವರ ಮಗ ನಿಝಾಮುದ್ದೀನ್ ಅಪಾಯದಿಂದ ಪಾರಾಗಿದ್ದು ಗ್ರಾಹಕ ಅಬಿದ್ದಿನ್ ಅವರಿಗೆ ಗಂಭೀರ ಗಾಯ ಗಳಾಗಿವೆ. ಅಪಘಾತದಿಂದ ಹೋಟೆಲ್ ಒಳಗಿದ್ದ ಸೊತ್ತುಗಳು ಹಾನಿಯಾಗಿ, ಸುಮಾರು 3 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ