ಉಡುಪಿ: ಸಾಲಿಗ್ರಾಮದ ಚಿತ್ರಪಾಡಿಯ ನರ್ತಕಿ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಅನವಶ್ಯಕವಾಗಿ ಗಲಾಟೆ ಮಾಡಿದ್ದು, ಬಾರ್ ಮಾಲೀಕನನ್ನು ಕೆಳಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಸೈನ್ಯದಲ್ಲಿದ್ದಾತ ತನ್ನ ಸ್ನೇಹಿತರಿಗಾಗಿ ಬಾರ್‌ನಲ್ಲಿ ಪಾರ್ಟಿಯನ್ನು ಆಯೋಜಿಸಿದ್ದ ಎನ್ನಲಾಗಿದೆ. ಪಾರ್ಟಿ ಬಳಿಕ ಅನವಶ್ಯಕವಾಗಿ ನಡೆದ ಗಲಾಟೆಯಲ್ಲಿ ಬಾರ್ ಮಾಲೀಕನ ಜತೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ನಡೆದು, ವಿಷಯ ತಾರಕಕ್ಕೇರಿ ಬಾರ್ ಮಾಲೀಕನ ಮೇಲೆ ದುಷ್ಕರ್ಮಿಗಳು ಕೈ ಹಾಕಿದ್ದಾರೆ. ಕೊನೆಗೆ ಹೊಡೆದು ಕೆಳಕ್ಕೆ ಉರುಳಿಸಿದ್ದಾರೆ. ಅವರನ್ನು ತುಳಿದು ಥಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಗಲಾಟೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ. ರೋಹಿತ್, ರಂಜಿತ್, ಸಚಿನ್, ಶಶಾಂಕ್, ವಿಘ್ನೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿಗಳೆನ್ನಲಾದ ಇಬ್ಬರನ್ನು ಪ್ರಕರಣದಿಂದ ಹೊರಗಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ