ಉಡುಪಿ: ಅಕ್ಕಿ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಅಲೆವೂರು ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಲಕನ ಬಳಿ ಇದ್ದ ಬಿಲ್‌ಗೂ ಹಾಗೂ ಲಾರಿಯಲ್ಲಿದ್ದ ಅಕ್ಕಿಯ ಚೀಲಗಳಿಗೆ ತಾಳೆಯಾಗದ ಹಿನ್ನೆಲೆಯಲ್ಲಿ ಅಕ್ಕಿ ಸಹಿತ ಲಾರಿಯನ್ನು ಜಪ್ತಿ ಮಾಡಲಾಗಿದೆ.
ಲಾರಿಯಲ್ಲಿ 50 ಕೆ.ಜಿ ಅಕ್ಕಿಯ 5 ಚೀಲ, 30 ಕೆ.ಜಿ ಅಕ್ಕಿಯ 14 ಚೀಲ, 26 ಕೆ.ಜಿ ಅಕ್ಕಿಯ ತುಂಬಿದ್ದ 3 ಚೀಲಗಳು, 25 ಕೆ.ಜಿ ಅಕ್ಕಿಯ 2 ಚೀಲ, 10 ಕೆ.ಜಿ ಅಕ್ಕಿಯ 11 ಚೀಲ, 5 ಕೆ.ಜಿ ಅಕ್ಕಿಯ 15 ಚೀಲಗಳಿದ್ದವು. ₹ 3.92 ಲಕ್ಷ ಮೌಲ್ಯದ 9.80 ಕ್ವಿಂಟಲ್ ಅಕ್ಕಿ ಹಾಗೂ ₹ 5 ಲಕ್ಷ ಮೌಲ್ಯದ ಲಾರಿ ಜಪ್ತಿ ಮಾಡಲಾಗಿದ್ದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ