ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಮೇ 29ರಿಂದ ಶಾಲೆಗಳನ್ನು ಪ್ರಾರಂಭವಾಗಲಿದೆ. ಆದರೆ, ನೀರಿನ ತೀವ್ರ ಕೊರತೆ ಮತ್ತು ವಿಪರೀತ ಬಿಸಿಲಿನ ಬೇಗೆಯ ಕಾರಣ ದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಕನಿಷ್ಠ ಮಳೆಗಾಲ ಪ್ರಾರಂಭವಾಗುವವರೆಗೆ ಮುಂದೂಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ಈ ಸಂದರ್ಭ ಶಾಲೆಗಳನ್ನು ತೆರೆದರೆ ನೀರಿನ ಕೊರತೆಯಿಂದ ಮಕ್ಕಳಿಗೆ, ಶಿಕ್ಷಕರಿಗೆ ಸಮಸ್ಯೆಯಾಗಬಹುದು. ಹಾಗಾಗಿ ಜೂನ್ ಎರಡನೇ ವಾರ ಶಾಲಾ ತರಗತಿ ಆರಂಭಿಸಲು ಮುಖ್ಯಮಂತ್ರಿ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ